ಕೇರಳದ ಲೆಸ್ಬಿಯನ್ ಜೋಡಿ ಆದಿಲಾ ನಸ್ರೀನ್, ಫಾತಿಮಾ ನೂರಾ ಮದುವೆಯಾಗಿದ್ದಾರಾ?

ಇವರ ವೆಡ್ಡಿಂಗ್ ಫೋಟೋಶೂಟ್ ಈಗ ಎಲ್ಲೆಡೆ ವೈರಲ್ ಆಗಿದೆ.

ಇಬ್ಬರೂ ವರಮಾಲೆ, ರಿಂಗ್ ಎಕ್ಸ್​ಚೇಂಜ್ ಮಾಡುವ ಫೋಟೋಸ್ ಕಂಡುಬಂದಿದೆ.

ಇವರಿಬ್ಬರ ಸಂಬಂಧ ದೊಡ್ಡ ವಿವಾದವಾಗಿತ್ತು. ಹೈಕೋರ್ಟ್ ಮೆಟ್ಟಿಲೇರಬೇಕಾಯಿತು.

ಫಾತಿಮಾ ಹಾಗೂ ಆದಿಲಾ ಬಾಲ್ಯದಿಂದಲೂ ಗೆಳತಿಯರು. ಇಬ್ಬರ ನಡುವೆ ಪ್ರೀತಿ ಹುಟ್ಟಿತ್ತು.

ಒಟ್ಟಿಗೆ ಬದುಕಲು ನಿರ್ಧರಿಸಿದರೂ ಪೋಷಕರು ಒಪ್ಪಲಿಲ್ಲ. ನಂತರ ಈ ಜೋಡಿ ಕೋಝಿಕ್ಕೋಡ್‌ನಿಂದ ಓಡಿ ಹೋದರು.

ಕುಟುಂಬ ಸದಸ್ಯರು ಇಬ್ಬರೂ ಒಟ್ಟಿಗೆ ವಾಸಿಸಲು ಒಪ್ಪಿಗೆ ಕೊಟ್ಟು ಮನೆಗೆ ಕರೆದುಕೊಂಡು ಹೋದರು.

ಆದರೆ ಮನೆಗೆ ಹೋದಾಗ ಇಬ್ಬರನ್ನೂ ಬೇರ್ಪಡಿಸಿದರು. ನಂತರ ಆದಿಲಾ ಕೇರಳ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಫಾತಿಮಾಳೊಂದಿಗೆ ಇರಲು ಆದಿಲಾಗೆ ಅವಕಾಶ ಕೊಟ್ಟು ಲೆಸ್ಬಿಯನ್ ಜೋಡಿ ಪರವಾಗಿ ಕೋರ್ಟ್ ತೀರ್ಪು ನೀಡಿತ್ತು.

ಮದುವೆ ಸುದ್ದಿ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿದ ಅವರು ನಾವು ಫೋಟೋಶೂಟ್‌ ಮಾಡಿದ್ದೇವೆ ಅಷ್ಟೆ ಎಂದಿದ್ದಾರೆ.

ನಾವು ಇನ್ನೂ ಮದುವೆಯಾಗಿಲ್ಲ. ಆದರೆ ನಾವು ಮದುವೆಯಾಗಲು ಬಯಸುತ್ತೇವೆ ಎಂದು ಅವರು ಹೇಳಿದರು.

ಆದರೆ ಇವರು ನಿಜಕ್ಕೂ ಮದುವೆಯಾಗಿದ್ದಾರೆ ಎನ್ನುವುದು ನೆಟ್ಟಿಗರ ವಾದ.

ಪೋಷಕರ ಬೆದರಿಕೆ ಇರುವ ಕಾರಣ ಮದುವೆಯಾಗಿಲ್ಲ ಎನ್ನುತ್ತಿದ್ದಾರೆ ಎನ್ನಲಾಗಿದೆ.