calcium ಕೊರತೆಯಾದರೆ ಹೀಗಾಗುತ್ತೆ ನೋಡಿ

ಕ್ಯಾಲ್ಸಿಯಂ ಕೊರತೆ ಉಂಟಾದಾಗ ದೇಹದಲ್ಲಿ ನೋವು, ಮಾಂಸಖಂಡ ಹಿಂಡಿದಂತೆ ಭಾಸವಾಗುವುದು ಮೊದಲಾದ ಸಮಸ್ಯೆಗಳು ಉಂಟಾಗುತ್ತಿರುತ್ತವೆ.

ಕ್ಯಾಲ್ಸಿಯಂ ಶ್ರೀಮಂತವಾಗಿರುವ ಆಹಾರಗಳೆಂದರೆ ಹಸಿ ಸೊಪ್ಪು, ತರಕಾರಿಗಳು, ಡ್ರೈ ಫ್ರೂಟ್ಸ್‌ಗಳು, ಬೀಟ್‌ರೂಟ್, ಎಳ್ಳು, ಚೀಸ್, ಸೋಯಾಬೀನ್ ಮೊದಲಾದವು. 

ರಾಜ್ಮಾ ಕಾಬೂಲು ಕಡಲೆ, ಚೀಸ್, ಹಾಲು, ಮೊಟ್ಟೆ, ಮೊಸರು ಕೂಡ ಕ್ಯಾಲ್ಸಿಯಂನ ಆಗರಗಳಾಗಿವೆ. 

ಕ್ಯಾಲ್ಸಿಯಂನ ಪರಿಮಾಣ ಹೆಚ್ಚಾದರೂ ಅನಾರೋಗ್ಯ ನಮ್ಮನ್ನು ಹಿಂಬಾಲಿಸುತ್ತಿರುತ್ತದೆ. ಹಾಗಾಗಿ ನಾವು ಸೇವಿಸುವ ಆಹಾರದಲ್ಲಿ ಸರಿಯಾದ ಪ್ರಮಾಣದ ಕ್ಯಾಲ್ಸಿಯಂ ಇರಬೇಕಾಗಿರುವುದು ಮುಖ್ಯವಾಗಿದೆ.

ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಕ್ಯಾಲ್ಸಿಯಂ ಅತ್ಯಗತ್ಯವಾಗಿದೆ. ಅವರ ದೇಹದಲ್ಲಿ 1000 ದಿಂದ 1200 ಎಮ್‌ಎಲ್‌ನಷ್ಟು ಕ್ಯಾಲ್ಸಿಯಂ ಇರಬೇಕು.

ಸ್ತ್ರೀ ಹಾರ್ಮೋನು ಈಸ್ಟ್ರೋಜನ್ ಕುಸಿತವಾಗುವುದೇ ಇದಕ್ಕೆ ಕಾರಣವಾಗಿದೆ. ಕ್ಯಾಲ್ಸಿಯಂ ರಿಚ್ ಆಹಾರಗಳಾದ ಹಾಲು, ಮೊಸರು ಮೊದಲಾದವುಗಳನ್ನು ಸೇವಿಸದೇ ಇರುವುದು ಹಾರ್ಮೋನ್ ಪರಿವರ್ತನೆಗೆ ಕಾರಣವಾಗಿದೆ.

ಅನೇಕ ದೈಹಿಕ ಕಾರ್ಯಗಳಿಗೆ ಕ್ಯಾಲ್ಸಿಯಂ ಅವಶ್ಯಕವಾಗಿದೆ, ಆದ್ದರಿಂದ ಕೊರತೆಯು ಸ್ನಾಯುಗಳು, ಮೂಳೆಗಳು ಮತ್ತು ಹಲ್ಲುಗಳು ಮತ್ತು ಮಾನಸಿಕ ಆರೋಗ್ಯದ ಮೇಲೆ ವ್ಯಾಪಕ ಪರಿಣಾಮಗಳನ್ನು ಬೀರುತ್ತದೆ

ಕಡಿಮೆ ಆಹಾರ ಸೇವನೆಯು ಇದರ ಕೊರತೆಗೆ ಕಾರಣವಾಗಿದ್ದರೆ, ಸಾಮಾನ್ಯವಾಗಿ ಯಾವುದೇ ಆರಂಭಿಕ ಲಕ್ಷಣಗಳಿಲ್ಲ. ದೀರ್ಘಾವಧಿಯಲ್ಲಿ, ವ್ಯಕ್ತಿಯು ಆಸ್ಟಿಯೋಪೆನಿಯಾ ಅಥವಾ ಕಡಿಮೆ ಮೂಳೆ ಸಾಂದ್ರತೆಯನ್ನು ಅನುಭವಿಸಬಹುದು.

ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆಯಾದಲ್ಲಿ ಮೂಳೆಗಳ ಸ್ನಾಯು ನೋವು, ಸೆಳೆತ, ತೊಡೆ ಮತ್ತು ತೋಳುಗಳಲ್ಲಿ ನಡೆದಾಡುವಾಗ ನೋವಿನ ಅನುಭವ ಉಂಟಾಗುವುದು