ಈ Animals ನಿದ್ರಿಸೋದೇ ಇಲ್ವಂತೆ!

ಚಿಟ್ಟೆಗಳು: ಚಿಟ್ಟೆಗಳು ನಿದ್ರಿಸೋದಿಲ್ಲ, ಆದ್ರೆ ಟಾರ್ಪೋರ್ ಸ್ಥಿತಿ ಪ್ರವೇಶಿಸುತ್ತವೆ 

ಟಾರ್ಪೋರ್ ಎನ್ನುವುದು ಪ್ರಾಣಿಗಳಲ್ಲಿ ಕಡಿಮೆಯಾದ ಶಾರೀರಿಕ ಚಟುವಟಿಕೆಯ ಸ್ಥಿತಿಯಾಗಿದೆ

ಟಿಲಾಪಿಯಾ: ಈ ಮೀನುಗಳು ತಮ್ಮ ಜೀವನದ ಮೊದಲ 22 ವಾರಗಳವರೆಗೆ ಎಚ್ಚರವಾಗಿರುತ್ತವೆ

ನೀಲಿಮೀನು: ಬ್ಲ್ಯೂಫಿಶ್ ನಿದ್ರೆ ಮಾಡುವುದಿಲ್ಲ, ಮಲಗಿರುವಾಗಲೂ ಸಹ ಈಜುತ್ತದೆ ಮತ್ತು ಪ್ರತಿಕ್ರಿಯಿಸುತ್ತದೆ 

ಆಲ್ಪೈನ್ ಸ್ವಿಫ್ಟ್ಸ್: ಇವು 200 ದಿನಗಳವರೆಗೆ ನಿರಂತರವಾಗಿ ಹಾರಬಲ್ಲವು, ಇವು ರೆಕ್ಕೆ ಲಾಕ್ ಮಾಡುವ ಮೂಲಕ ಗಾಳಿಯಲ್ಲಿ ನಿದ್ರಿಸುತ್ತವೆ 

ಓರ್ಕಾ: ಓರ್ಕಾಸ್ ಅರ್ಧ ನಿದ್ರೆ ಮಾಡುತ್ತದೆ ಹಾಗೂ ನಿಧಾನವಾಗಿ ಈಜುವಾಗ ಒಂದು ಕಣ್ಣು ತೆರೆದು, ಒಂದು ಕಣ್ಣು ಮುಚ್ಚುತ್ತದೆ 

ಹಣ್ಣಿನ ನೊಣ: ಕೆಲ ನೊಣಗಳು 10 ಗಂಟೆ, ಕೆಲವು 4 ನಿಮಿಷ ಹಾಗೂ ಇನ್ನೂ ಕೆಲ ನೊಣಗಳು ನಿದ್ರಿಸೋದೇ ಇಲ್ಲ

ಜೆಲ್ಲಿ ಫಿಶ್: ಇವುಗಳಿಗೆ ಮೆದುಳು ಇಲ್ಲದಿರೋದ್ರಿಂದ ನಿದ್ರಿಸಲು ಸಾಧ್ಯವಿಲ್ಲ

ಬುಲ್ಫ್ರಾಗ್: ಇವುಗಳು ಎಂದಿಗೂ ನಿದ್ರಿಸುವುದಿಲ್ಲ, ಆದ್ರೆ ಜಾಗರೂಕತೆಯಿಂದ ವಿಶ್ರಾಂತಿ ಪಡೆಯುತ್ತವೆ

ಡಾಲ್ಫಿನ್: ಬೇಬಿ ಡಾಲ್ಫಿನ್ ಮತ್ತು ಅದರ ತಾಯಿಯು ಜನನದ ಬಳಿಕ ಒಂದು ತಿಂಗಳವರೆಗೆ ಎಚ್ಚರವಾಗಿರುತ್ತವೆ 

ಗ್ರೇಟ್ ಫ್ರಿಗೇಟ್ ಬರ್ಡ್: ಈ ಹಕ್ಕಿಗಳು ಎಲ್ಲಿಯೂ ವಿಶ್ರಾಂತಿ ಪಡೆಯದೇ ನಿರಂತರವಾಗಿ 2 ತಿಂಗಳು ಹಾರಾಡುತ್ತವೆ