ಸ್ಯಾಂಡ್ವಿಚ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಅದನ್ನು ಮನೆಯಲ್ಲಿ ಮಾಡಿ ತಿಂದ್ರೆ ಇನ್ನೂ ರುಚಿಕರ

ಹಾಗಾದ್ರೆ ಮನೆಯಲ್ಲಿ ಪನ್ನೀರ್ ಸ್ಯಾಂಡ್ವಿಚ್ ಮಾಡುವ ವಿಧಾನ ಇಲ್ಲಿದೆ

ಪನೀರ್ ಸ್ಯಾಂಡ್ವಿಚ್ ಮಾಡಲು ಬೇಕಾಗುವ ಸಾಮಾಗ್ರಿಗಳು, ಪನೀರ್, ಬ್ರೆಡ್, ಈರುಳ್ಳಿ,ಕ್ಯಾಪ್ಸಿಕಂ.

ಹಸಿಮೆಣಸು, ಅರಿಶಿನ, ಖಾರದ ಪುಡಿ, ಟೊಮ್ಯಾಟೊ ಸಾಸ್, ಉಪ್ಪು, ಎಣ್ಣೆ, ಬೆಣ್ಣೆ

ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಕಾಯಿಸಿಕೊಂಡು ಈರುಳ್ಳಿಯನ್ನು ಚನ್ನಾಗಿ ಹುರಿಯಿರಿ

ಕ್ಯಾಪ್ಸಿಕಂ, ಹಸಿಮೆಣಸು ಹಾಕಿ ಹುರಿದುಕೊಳ್ಳಿ, ಅದಕ್ಕೆ ಅರಿಶಿನ ಮತ್ತು ಉಪ್ಪು ಹಾಕಿ. 

ಅಚ್ಚ ಖಾರದ ಪುಡಿ ಮತ್ತು ಟೊಮ್ಯಾಟೋ ಸಾಸ್ ಮಿಕ್ಸ್ ಮಾಡಿ ಅದಕ್ಕೆ ಪನೀರ್ ಹಾಕಿ


ಪನೀರ್ ಎಲ್ಲ ಪದಾರ್ಥಗಳನ್ನು ಹೀರಿಕೊಳ್ಳುವ ತನಕ ಚನ್ನಾಗಿ ಹುರಿಯಿರಿ

ನಂತರ ಟೋಸ್ಟರ್ ನಲ್ಲಿ ಬ್ರೆಡ್ಡಿಗೆ ಬೆಣ್ಣೆ ಹಚ್ಚಿ , ಅದರ ಮೇಲೆ ಪನೀರ್ ಮಸಾಲೆ ಹಾಕಿ ಟೋಸ್ಟ್ ಮಾಡಿ 

ಪನೀರ್ ಸ್ಯಾಂಡ್ವಿಚ್ ರೆಡಿಯಾಗಿದ್ದು, ಸಾಸ್ ಜೊತೆ ಸವಿಯಿರಿ