ಗಂಟಲು ನೋವಿಗೆ ಸರಳ ಮನೆಮದ್ದು ಇಲ್ಲಿದೆ 

ಶುಂಠಿ ಚಹಾ ಕುಡಿಯುವುದು ನಿಮ್ಮ ಗಂಟಲು ನೋವಿಗೆ ಬೇಗ ಪರಿಹಾರ ನೀಡುತ್ತದೆ. 

ಬಿಸಿ ಬಿಸಿ ಸೂಪ್ ಕುಡಿಯುವುದು ಉತ್ತಮ ಎನ್ನಲಾಗುತ್ತದೆ, ಬಿಸಿ ಆಹಾರಗಳು ನೋವಿಗೆ ಪರಿಣಾಮಕಾರಿ

ಗಂಟಲು ನೋವಿದ್ದರೆ ಒಂದು ಲೋಟ ಬೆಚ್ಚಗಿನ ನೀರಿಗೆ ಜೇನುತುಪ್ಪ ಹಾಕಿ ಕುಡಿಯಿರಿ

ಮಸಾಲೆ ಚಹಾ ನಿಮ್ಮ ಗಂಟಲು ನೋವಿನ ಸಮಸ್ಯೆಗೆ ರಾಮಬಾಣ ಎನ್ನಬಹುದು. 

ಪುದೀನಾ ಚಹಾ ತಲೆನೋವಿನಿಂದ ಹಿಡಿದು ಗಂಟಲು ನೋವಿನವರೆಗೆ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. 

ಅರಿಶಿನವನ್ನು ಬೆಚ್ಚಗಿನ ಹಾಲಿಗೆ ಹಾಕಿ ಕುಡಿದರೆ ಗಂಟಲು ನೋವು ಕಡಿಮೆಯಾಗುತ್ತದೆ. 

ನಿಂಬೆ ನೀರು ಗಂಟಲಿನ ಸೋಂಕನ್ನು ನಿವಾರಿಸಿ, ನೋವಿಗೆ ಪರಿಹಾರ ನೀಡುತ್ತದೆ.

ಬೆಚ್ಚಗಿನ ನೀರಿಗೆ ಉಪ್ಪು ಹಾಕಿ ದಿನಕ್ಕೆ 5 ರಿಂದ 6 ಬಾರಿ ಮುಕ್ಕಳಿಸುವುದು ಪ್ರಯೋಜನ ನೀಡುತ್ತದೆ. 

ಒಂದು ಲೋಟ ನೀರಿಗೆ ಆ್ಯಪಲ್ ಸೈಡರ್ ವಿನೆಗರ್ ಹಾಕಿ ಅದರಿಂದ ಸಹ ಬಾಯಿ ಮುಕ್ಕಳಿಸಿ.