ಗಂಟಲು ನೋವಿಗೆ ಈ ಮನೆಮದ್ದುಗಳೇ ಬೆಸ್ಟ್
ಗಂಟಲು ನೋವು ಇದ್ದರೆ, ಬೆಚ್ಚಗಿನ ನೀರಿಗೆ ಜೇನುತುಪ್ಪ ಹಾಕಿ ದಿನಕ್ಕೆ 2 ರಿಂದ 3 ಬಾರಿ ಕುಡಿಯಿರಿ.
ಶುಂಠಿ ಚಹಾ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
ನಿಂಬೆ ನೀರು ದೇಹದಲ್ಲಿನ ವಿಷವನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ಇದು ಗಂಟಲಿನ ಸೊಂಕುಗಳನ್ನು ಸಹ ನಿವಾರಿಸುತ್ತದೆ
ಉಪ್ಪು ನೀರು ಗಂಟಲಿನ ನೋವಿಗೆ ಮುಕ್ತಿ ನೀಡುತ್ತದೆ
ಬೆಚ್ಚಗಿನ ನೀರಿಗೆ ಆ್ಯಪಲ್ ಸೈಡರ್ ವಿನೆಗರ್ ಹಾಕಿ ಕುಡಿಯುವುದು ಸಹ ಪ್ರಯೋಜನ ನೀಡುತ್ತದೆ.
ಮಸಾಲೆ ಚಹಾ ಕುಡಿಯುವುದು ನಿಮಗೆ ಆರಾಮದಾಯಕ ಜೊತೆಗೆ ಗಂಟಲು ನೋವಿಗೆ ಪರಿಹಾರ ನೀಡುತ್ತದೆ.
ನೀರಿಗೆ ಪುದೀನಾ ಎಲೆಗಳನ್ನು ಹಾಕಿ ಕುದಿಸಿ, ಅದಕ್ಕೆ ಸ್ವಲ್ಪ ಉಪ್ಪು ಹಾಗೂ ನಿಂಬೆ ರಸ ಹಾಕಿ ಕುಡಿಯಿರಿ.
ಬಿಸಿ ಬಿಸಿ ಸೋಪ್ ಮತ್ತು ವಿವಿಧ ಬಿಸಿ ಬಿಸಿ ಆಹಾರಗಳನ್ನು ತಿನ್ನುವುದು, ಕುಡಿಯುವುದು ಗಂಟಲು ನೋವಿಗೆ ಪರಿಹಾರ ನೀಡುತ್ತದೆ
ಅರಿಶಿನದಲ್ಲಿ ಹೆಚ್ಚಿನ ಆ್ಯಂಟಿ ಆಕ್ಸಿಡೆಂಟ್ಗಳಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.