ಇತ್ತೀಚಿನ ದಿನಗಳಲ್ಲಿ ನಿದ್ದೆಯ ಸಮಸ್ಯೆಯನ್ನು ಹಲವಾರು ಜನರು ಅನುಭವಿಸುತ್ತಿದ್ದಾರೆ.

ಒತ್ತಡದ ಕಾರಣದಿಂದ ರಾತ್ರಿ ನಿದ್ದೆ ಬರದೇ ಒದ್ದಾಡುತ್ತಿರುತ್ತಾರೆ.

ನಿಮಗೂ ನಿದ್ದೆಯ ಸಮಸ್ಯೆ ಇದ್ದರೆ ಈ ಮನೆಮದ್ದುಗಳನ್ನು ಬಳಸಿ

ರಾತ್ರಿ ಮಲಗುವ ಮುನ್ನ ಜೀರಿಗೆ ತಿನ್ನಿ, ಇದು ನಿದ್ರೆಯ ಸಮಸ್ಯೆಗೆ ಪರಿಹಾರ ನೀಡುತ್ತದೆ. 

ಅಲ್ಲದೇ, ಒಂದು ಲೋಟ ಬೆಚ್ಚಗಿನ ಹಾಲು ನಿಮ್ಮ ನಿದ್ರೆಯ ಸಮಸ್ಯೆಗೆ ರಾಮಬಾಣ 

ಪುದೀನಾ ಮತ್ತು ಶುಂಠಿಯ ಚಹಾ ಒತ್ತಡ ನಿವಾರಿಸಿ, ಆತಂಕವನ್ನು ದೂರ ಮಾಡುತ್ತದೆ

ಏನೇ ಮಾಡಿದರೂ ನಿದ್ದೆ ಬರ್ತಿಲ್ಲ ಎಂದರೆ 1 ಚಮಚ ಜೇನುತುಪ್ಪ ತಿನ್ನಿ 

ಅರಿಶಿನ ಹಾಲಿನಲ್ಲಿ ಆ್ಯಂಟಿ ಆಕ್ಸಿಡೆಂಟ್ ಇದ್ದು, ಇದು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ.

ಬಾಳೆಹಣ್ಣು ಹಲವಾರು ಪೋಷಕಾಂಶಗಳನ್ನು ಹೊಂದಿದ್ದು, ರಾತ್ರಿ ಮಲಗುವ ಮುನ್ನ ಒಂದು ತಿನ್ನಿ

ಪ್ರತಿದಿನ ಯೋಗ ಮಾಡುವುದು ಒತ್ತಡವನ್ನು ನಿವಾರಿಸಿ, ನಿದ್ರೆಯ ಸಮಸ್ಯೆಗೆ ಪರಿಹಾರ ನೀಡುತ್ತದೆ.