Hair Fall ಸಮಸ್ಯೆಗೆ ಇಲ್ಲಿದೆ ಮನೆಮದ್ದು
ಈರುಳ್ಳಿಯನ್ನು ರುಬ್ಬಿಕೊಂಡು, ರಸವನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ
ಮೊಟ್ಟೆಯ ಬಿಳಿಭಾಗ ಮತ್ತು ಮೊಸರನ್ನು ಮಿಕ್ಸ್ ಮಾಡಿ ವಾರಕ್ಕೆ 2 ಬಾರಿ ಕೂದಲಿಗೆ ಹಚ್ಚಿ ಸಾಕು
ಕರಿಬೇವಿನ ಎಲೆಗಳನ್ನು ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ, ಅದನ್ನು ಕೂದಲಿಗೆ ಹಚ್ಚಿ 30 ನಿಮಿಷಗಳ ನಂತರ ತೊಳೆಯಿರಿ
ಅಲೋವೇರಾ ಜೆಲ್ ಅನ್ನು ಕೂದಲ ಬುಡಗಳಿಗೆ ಹಚ್ಚಿ, 20 ರಿಂದ 30 ನಿಮಿಷಗಳ ಕಾಲ ಬಿಟ್ಟು ನಂತರ ತೊಳೆಯಿರಿ
ಅಗಸೆ ಬೀಜವನ್ನು ನಿಮ್ಮ ಆಹಾರದಲ್ಲಿ ಸೇರಿಸುವುದರಿಂದ ಕೂದಲ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ
ತೆಂಗಿನ ತುರಿ ತೆಗೆದುಕೊಂಡು, ಅದರಿಂದ ಹಾಲು ತೆಗೆದುಕೊಳ್ಳಿ. ಅದನ್ನು ಕೂದಲಿಗೆ ಹಚ್ಚಿ. 1 ಗಂಟೆಯ ನಂತರ ತಲೆಸ್ನಾನ ಮಾಡಿ
ನಂಬಿದ್ರೆ ನಂಬಿ ಗ್ರೀನ್ ಟೀ ಪುಡಿಯ ಪೇಸ್ಟ್ ಹಚ್ಚಿದರೆ ಕೂದಲು ಉದುರುವುದು ನಿಲ್ಲುತ್ತದೆ
ನೆಲ್ಲಿಕಾಯಿ ಪುಡಿಗೆ ಸ್ವಲ್ಪ ನಿಂಬೆರಸ ಹಾಕಿ ಮಿಕ್ಸ್ ಮಾಡಿ, ಅದನ್ನು ಕೂದಲಿಗೆ ಹಚ್ಚಿದರೆ ಕೂದಲ ಸಮಸ್ಯೆ ಬರಲ್ಲ
ಮೆಂತ್ಯೆ ಬೀಜಗಳನ್ನು ರಾತ್ರಿ ನೆನಸಿಡಿ, ಅದನ್ನು ಬೆಳಗ್ಗೆ ಪೇಸ್ಟ್ ಮಾಡಿಕೊಂಡು ಕೂದಲಿಗೆ ಮಾಸ್ಕ್ ಆಗಿ ಹಚ್ಚಿ
ಬೀಟ್ರೂಟ್ ಜ್ಯೂಸ್ ಕೂದಲಿಗೆ ಹಚ್ಚುವುದರಿಂದ ಬಣ್ಣ ಸಹ ಬದಲಾಗುತ್ತದೆ ಹಾಗೂ ಕೂದಲು ಉದುರುವುದಿಲ್ಲ