ಪಾನ್ ತನ್ನ ಜೀರ್ಣಕಾರಿ ಗುಣಲಕ್ಷಣಗಳಿಂದ ಹುಟ್ಟಿಕೊಂಡಿದೆ. ಊಟದ ನಂತರ ಇದನ್ನು ಸೇವಿಸುತ್ತಾರೆ.
ವೀಳ್ಯದೆಲೆ ರೈಬೋಫ್ಲಾವಿನ್, ಕ್ಯಾಲ್ಸಿಯಂ, ವಿಟಮಿನ್ ಸಿ, ಕ್ಯಾರೋಟಿನ್ಗಳಿಂದ ತುಂಬಿದೆ.
ಇದನ್ನು ಊಟದ ನಂತರ ಸೇವಿಸಬಹುದು. ಪಾನ್-ಊಟದ ನಡುವೆ 30 ನಿಮಿಷಗಳ ಅಂತರ ಬೇಕು.
ಗುಲಾಬಿ ದಳ, ಲವಂಗ, ತೆಂಗಿನಕಾಯಿ ಪುಡಿ, ಸೌನ್ಫ್ಗಳಂತಹ ಪಾನ್ನ ಘಟಕಗಳು ಪೌಷ್ಟಿಕಾಂಶ ಹೊಂದಿದೆ.
ಪಾನ್ ತೆಂಗಿನ ಪುಡಿ, ಗುಲ್ಕಂಡ್, ಲವಂಗ, ಸೌನ್ಫ್, ಕೆಂಪು ಕಥಾ ಪೇಸ್ಟ್ ಅನ್ನು ಒಳಗೊಂಡಿರುತ್ತದೆ
ಪಾನ್ ಅದರ ಅನೇಕ ಘಟಕಗಳ ಕಾರಣದಿಂದಾಗಿ ಜೀರ್ಣಕ್ರಿಯೆಗೆ ನೆರವಾಗುತ್ತದೆ.
ಡಯಾಬಿಟಿಸ್ ಇರುವವರಿಗೂ ಇದು ಬೆಸ್ಟ್. ಗುಲ್ಕಂಡ್ ಪ್ರಮಾಣ ಕಡಿಮೆ ಇರುವಂತೆ ನೋಡಿಕೊಳ್ಳಿ ಅಷ್ಟೆ.
ಗುಲಾಬಿ ದಳಗಳು ಮತ್ತು ತೆಂಗಿನ ಪುಡಿಯಂತಹ ಕೂಲಿಂಗ್ನಿಂದಾಗಿ ಪಾನ್ ಸೇವನೆಯು ತಲೆನೋವಿಗೆ ಸ್ವಲ್ಪ ಪರಿಹಾರ ನೀಡುತ್ತದೆ.
ಪಾನ್ ಸಂಯೋಜನೆ ಅನಗತ್ಯ ಕೊಬ್ಬು ಕರಗಿಸುತ್ತದೆ. ಜೀರ್ಣಕ್ರಿಯೆ ವೇಗವಾಗಿ ಬೊಜ್ಜು ಉಂಟಾಗುವುದನ್ನು ತಡೆಯುತ್ತದೆ.
ವೀಳ್ಯದೆಲೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿರುವುದರಿಂದ ಇದು ನಿಮ್ಮ ಬಾಯಿಯನ್ನು ಸ್ವಚ್ಛವಾಗಿಡುತ್ತದೆ.