Back Pain ನಿವಾರಣೆಗೆ ಯಾವ ಯೋಗಾಸನ ಬೆಸ್ಟ್

ಬೆನ್ನು ನೋವಿಗೆ ಹಲವು ಕಾರಣಗಳಿದ್ದು, ಸಾಮಾನ್ಯವಾಗಿ ಬೆನ್ನು ನೋವು ಅನೇಕ ಜನರನ್ನು ಕಾಡುತ್ತದೆ

ಬೆನ್ನಿನ ಸ್ನಾಯುಗಳು ಮತ್ತು ನರಗಳ ತೊಂದರೆಯಿಂದಲೂ ಬೆನ್ನು ನೋವು ಎದುರಾಗಿರುತ್ತದೆ

ವ್ಯಾಯಾಮದ ಕೊರತೆ ಹಾಗೂ ತಪ್ಪಾದ ಭಂಗಿಯಲ್ಲಿ ಕುಳಿತುಕೊಳ್ಳುವುದರಿಂದಲೂ ಬೆನ್ನುನೋವು ಬರುತ್ತದೆ

ಕೆಲವು ಯೋಗಾಸನಗಳ ಮೂಲಕ ನಾವು ಬೆನ್ನುನೋವಿನಿಂದ ಮುಕ್ತಿ ಪಡೆಯಬಹುದು

ಅನೇಕ ಆರೋಗ್ಯ ತಜ್ಞರು ಬೆನ್ನುನೋವಿಗೆ ಭುಜಂಗಾಸನವೇ ಬೆಸ್ಟ್ ಎನ್ನುತ್ತಾರೆ

ಭುಜಂಗಾಸನವು ಬೆನ್ನಿನ ಬಾಹ್ಯ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ

ಬಾಲಾಸನ: ಇದು ಬೆನ್ನುಮೂಳೆ, ತೊಡೆಗಳು, ಸೊಂಟ ಮತ್ತು ಕಾಲುಗಳನ್ನು ಹಿಗ್ಗಿಸಲು ಮತ್ತು ವಿಸ್ತರಿಸಲು ಸಹಾಯ ಮಾಡುತ್ತದೆ

ವೀರಭದ್ರಾಸನ: ಬೆನ್ನನ್ನು ಬಲಪಡಿಸಲು ಸಹಾಯ ಮಾಡುತ್ತದೆ

ಸಲಭಾಸನ: ಆಯಾಸ ಮತ್ತು ಬೆನ್ನು ನೋವಿನಿಂದ ಪರಿಹಾರವನ್ನು ನೀಡುತ್ತದೆ ಮತ್ತು ಕಾಲುಗಳು, ತೋಳುಗಳನ್ನು ಬಲಪಡಿಸುತ್ತದೆ