Zomato ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ ಬೆಂಗಳೂರಿನ ಗ್ರಾಹಕ!

ಬೆಂಗಳೂರು ಮಲ್ಲೇಶ್ವರಂನ 28ರ ಹರೆಯದ ವ್ಯಕ್ತಿಯೊಬ್ಬರು ಝೊಮ್ಯಾಟೋದಲ್ಲಿ ಚೋಲೆ ಥಾಲಿಯನ್ನು ಆರ್ಡರ್ ಮಾಡಿದ್ದರು

ಆದರೆ ಎಷ್ಟು ಹೊತ್ತಾದರೂ ಅವರ ಆರ್ಡರ್ ಕೈ ಸೇರಿಲ್ಲ. ಹೀಗಾಗಿ ಹೊಟೇಲ್ ಮತ್ತು ಝೊಮ್ಯಾಟೊ ವಿರುದ್ಧ ಆಹಾರ ವಿತರಣಾ ವೇದಿಕೆ ಮತ್ತು ಗ್ರಾಹಕ ನ್ಯಾಯಾಲಯದ ಮೊರೆ ಹೋಗಿತ್ತು

ಸಂಗ್ರಾಹಕ ಮತ್ತು ರೆಸ್ಟೋರೆಂಟ್‌ಗೆ ಜಂಟಿಯಾಗಿ 3,000 ರೂಪಾಯಿ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ

ಏಪ್ರಿಲ್ 14 2022ರಂದು ಅಭಿಷೇಕ್ ಎಂ.ಆರ್ ಎಂಬವರು ಝೊಮ್ಯಾಟೋದಲ್ಲಿ ಅಮೃತಸರ ಚೋಲೆ ಬಟೂರೆಯನ್ನು ಆರ್ಡರ್ ಮಾಡಿದ್ದರು

ರಾಜಾಜಿನಗರದ ಬಾಕ್ಸ್‌ 8 ದೇಸಿ ಮಸಾಲ ರೆಸ್ಟೋರೆಂಟ್‌ನಿಂದ ಇದನ್ನು ಆರ್ಡರ್‌ ಮಾಡಲಾಗಿತ್ತು. ರಾತ್ರಿ 8.46ಕ್ಕೆ ಅಭಿಷೇಕ್ 256 ರೂ. ಪಾವತಿಸಿ ಫುಡ್ ಆರ್ಡರ್ ಮಾಡಿದ್ದರು

ಆದ್ರೆ ಸಮಯ ರಾತ್ರಿ 9.45 ಆದರೂ ಫುಡ್ ಡೆಲಿವರಿ ಆಗಿಲ್ಲ. ಈ ಬಗ್ಗೆ ಝೊಮ್ಯಾಟೊ ಏಜೆಂಟ್‌ಗೆ ಕರೆ ಮಾಡಿ ವಿಚಾರಿದರೂ ಯಾವುದೇ ಸ್ಪಷ್ಟ ಉತ್ತರ ಸಿಕ್ಕಿರಲ್ಲಿಲ್ಲ

ಈ ಪ್ರಕರಣದ ಬಗ್ಗೆ ತಿಳಿದ ಫುಡ್ ಡೆಲಿವರಿ ಆಪ್ ತನ್ನಿಂದಾದ ತಪ್ಪಿಗೆ ಕ್ಷಮೆಯಾಚಿಸಿದ್ದು, ಹಣವನ್ನು ರಿಫಂಡ್ ಮಾಡಿದೆ. ಮಾತ್ರವಲ್ಲ ವಾಲೆಟ್‌ಗೆ ಸಾವಿರ ರೂಪಾಯಿಯನ್ನು ಕ್ರೆಡಿಟ್ ಮಾಡಿದೆ

ಆದರೆ ಅಭಿಷೇಕ್ ಈ ಕುರಿತು ನ್ಯಾಯಾಲಯಕ್ಕೆ ದೂರು ನೀಡಲು ನಿರ್ಧರಿಸಿದರು ಮತ್ತು ಒಂದು ಲಕ್ಷ ಪರಿಹಾರ ಕೋರಿ ಅರ್ಜಿ ಸಲ್ಲಿಸಿದರು

ನ್ಯಾಯಾಲಯಕ್ಕೆ ದೂರು ನೀಡಲು ನಿರ್ಧರಿಸಿದರು ಮತ್ತು ಒಂದು ಲಕ್ಷ ಪರಿಹಾರ ಕೋರಿ ಅರ್ಜಿ ಸಲ್ಲಿಸಿದರು. ಆದರೆ ಜೊಮ್ಯಾಟೋದ ಲಾಯರ್ ಇಷ್ಟು ಮೊತ್ತದ ಪರಿಹಾರವನ್ನು ನೀಡಲು ನಿರಾಕರಿಸುವುದಾಗಿ ಹೇಳಿದರು

ರೆಸ್ಟೋರೆಂಟ್‌ನ ತಪ್ಪಿನಿಂದ ಹೀಗಾಗಿದ್ದು, ಝೊಮ್ಯಾಟೊ ಇದಕ್ಕಾಗಿ ಈಗಾಗಲೇ ಒಂದು ಸಾವಿರ ರೂ. ನೀಡಿದೆ ಎಂದು ತಿಳಿಸಿದರು

ಆದರೆ ಡಿಸೆಂಬರ್ 31, 2022ರಂದು ನೀಡಿದ ಕೋರ್ಟ್‌ನಲ್ಲಿ ನ್ಯಾಯಾಲಯ ಜೊಮ್ಯಾಟೋ ಸಂಸ್ಥೆ ವ್ಯಕ್ತಿಗೆ ಮೂರು ಸಾವಿರ ಪಾವತಿಸುವಂತೆ ಸೂಚಿಸಿದೆ