ಗದಗದಲ್ಲಿದೆ ಯೋಗ ಗ್ರಾಮ!

ಇಲ್ಲೊಂದು ಹಳ್ಳಿ ಇದೆ ನೋಡಿ, ಇದನ್ನು ‘ಯೋಗ ಗ್ರಾಮ’ ಅಂತಾನೆ ಕರಿತಾರಂತೆ

ಕರ್ನಾಟಕದಲ್ಲಿರುವ ಗದಗ ಪಟ್ಟಣದಿಂದ 10 ಕಿಲೋ ಮೀಟರ್ ದೂರದಲ್ಲಿದೆ ಈ ಗ್ರಾಮ

ಗದಗ ಪಟ್ಟಣದಿಂದ 10 ಕಿಲೋ ಮೀಟರ್ ದೂರದಲ್ಲಿರುವ ಕಪ್ಪತಗುಡ್ಡದ ತಪ್ಪಲಿನಲ್ಲಿರುವ ಈ ಪಾಪನಾಶಿ ಹಳ್ಳಿಯ ನಿವಾಸಿಗಳು ತಮ್ಮ ಆರೋಗ್ಯದ ಬಗ್ಗೆ ಬೇರೆ ಹಳ್ಳಿಯ ನಿವಾಸಿಗಳಿಗಿಂತಲೂ ಸ್ವಲ್ಪ ಜಾಸ್ತಿಯೇ ಕಾಳಜಿ ವಹಿಸುತ್ತಾರೆ

ಪಾಪನಾಶಿ ಹಳ್ಳಿಯಯಲ್ಲಿ ವಾಸ ಮಾಡುತ್ತಿರುವ ಎಲ್ಲಾ ರೈತರು ದಿನದ ಕೆಲಸವನ್ನು ಶುರು ಮಾಡುವ ಮೊದಲು ತಮ್ಮ ಯೋಗಾಭ್ಯಾಸವನ್ನು ಪೂರ್ಣಗೊಳಿಸುತ್ತಾರೆ

ಈ ಗ್ರಾಮಸ್ಥರು ತಮ್ಮ ಯೋಗಾಸನಗಳನ್ನು ದಿನಕ್ಕೆ ಬರೀ ಒಂದಲ್ಲ, ಎರಡು ಬಾರಿ ಅಭ್ಯಾಸ ಮಾಡುತ್ತಾರೆ

ಸುಮಾರು 2,000 ಜನಸಂಖ್ಯೆಯನ್ನು ಹೊಂದಿರುವ ಈ ಗ್ರಾಮವು 'ಯೋಗ ಗ್ರಾಮ' ಎಂಬ ಟ್ಯಾಗ್ ಅನ್ನು ಸಹ ಗಳಿಸಿದೆ

2020ರ ಫೆಬ್ರವರಿಯಲ್ಲಿ ಆಯುರ್ವೇದ ವೈದ್ಯ ಅಶೋಕ್ ಮತ್ತಿಕಟ್ಟಿ ಅವರು ಯೋಗ ತರಗತಿಗಳನ್ನು ಮೊದಲ ಬಾರಿಗೆ ಪ್ರಾರಂಭಿಸಿದರು

ಲಾಕ್ಡೌನ್ ನಂತರ, ಗ್ರಾಮಸ್ಥರು ವೈದ್ಯರ ಅಡಿಯಲ್ಲಿ ಉಚಿತವಾಗಿ ತರಬೇತಿಯನ್ನು ಪೂರ್ಣಗೊಳಿಸಿದರು ಮತ್ತು ಇದನ್ನು ಹಾಗೆಯೇ ಮುಂದುವರಿಸಿದರು

ಎರಡು ವರ್ಷಗಳ ಹಿಂದೆ ಮತ್ತಿಕಟ್ಟಿಯವರು ಮೊದಲು ಕೆಲವು ಮಕ್ಕಳು, ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ತರಬೇತಿ ನೀಡಲು ಪ್ರಾರಂಭಿಸಿದರು