Feast for Son-in-law:ಅಳಿಯನಿಗೆ ಭರ್ಜರಿ ಔತಣ

ಎಲೂರಿನ ಕುಟುಂಬವೊಂದು ಅಳಿಯನಿಗೆ 379 ಬಗೆಯ ಖಾದ್ಯಗಳನ್ನೊಳಗೊಂಡ ಔತಣ ಏರ್ಪಡಿಸಿತ್ತು

ಇತ್ತೀಚಿನ ವರ್ಷಗಳಲ್ಲಿ ರೀತಿ ಅಳಿಯನಿಗೆ ಇಷ್ಟು ಖಾದ್ಯ ಉಣಬಡಿಸಿದ್ದು ಇದೇ ಮೊದಲು

ಇದೀಗ ಸೋಶಿಯಲ್ ಮೀಡಿಯಾದಲ್ಲಿ 379 ಬಗೆ ಖಾದ್ಯಗಳ ಔತಣದ ವಿಡಿಯೋ ವೈರಲ್ ಆಗುತ್ತಿದೆ

ಹಬ್ಬಗಳ ಸಂದರ್ಭದಲ್ಲಿ ಅಳಿಯನನ್ನು ಉಪಚರಿಸುವುದು ಭಾರತದಲ್ಲಿ ಸಾಮಾನ್ಯವಾಗಿದೆ

ಸಂಕ್ರಾಂತಿಯಂದು ಅಳಿಯನಿಗೆ ಅದ್ಧೂರಿಯಾಗಿ ಉಪಚರಿಸುವ ಸಂಪ್ರದಾಯ ಆಂಧ್ರದಲ್ಲಿ ಕಳೆದ ಕೆಲ ವರ್ಷಗಳಿಂದ ಹೆಚ್ಚುತ್ತಿದೆ

ಹಿಂದೆ ಕುಟುಂಬವೊಂದು ಅಳಿಯನಿಗೆ 365 ಬಗೆಯ ಆಹಾರ ತಯಾರಿಸಿ ಬಡಿಸಿದ್ದು ವೈರಲ್ ಆಗಿತ್ತು

ಅನಕಾಪಲ್ಲಿ ಪಟ್ಟಣದ ಬುದ್ಧ ಮುರಳೀಧರ್ ಗೋದಾವರಿ ಜಿಲ್ಲೆಯ ಯುವತಿಯನ್ನು ಮದುವೆಯಾಗಿದ್ದರು

ಕಳೆದ ವರ್ಷವಷ್ಟೇ ಅವರು ಗೋದಾವರಿ ಜಿಲ್ಲೆಯ ಯುವತಿಯನ್ನು ವಿವಾಹವಾಗಿದ್ದರು

ಒಂದು ವಾರದಿಂದ ಮುರಳೀಧರ್ ಅತ್ತೆ-ಮಾವ ತಮ್ಮ ಅಳಿಯನಿಗೆಂದೇ ವಿವಿಧ ಖಾದ್ಯವನ್ನು ರೆಡಿ ಮಾಡುತ್ತಿದ್ದರಂತೆ

ಕೊನೆಗೂ ಸಂಕ್ರಾಂತಿ ಹಬ್ಬಕ್ಕೆ 379 ಬಗೆಯ ಭಕ್ಷ್ಯಗಳನ್ನು ಅವರು ತಮ್ಮ ಅಳಿಯನಿಗೆ ಉಣಬಡಿಸಿದ್ದಾರೆ