21 ರ ಹರೆಯದ ಮೊಮ್ಮಗನಿಗೆ ಕಿಡ್ನಿ ದಾನ ಮಾಡಿದ 73 ವರ್ಷದ ಅಜ್ಜಿ!
ಕಿಡ್ನಿ ಕಸಿ ಮಾಡಿಸಿಕೊಂಡ ಯುವಕನ ಹೆಸರು ಸಚಿನ್.
ಅಜ್ಜಿ ನೀಡಿದ ಕಿಡ್ನಿ ದಾನದಿಂದ ಬದುಕುವ ಹುಮ್ಮಸ್ಸು ಹೆಚ್ಚಾಗಿದೆ ಎಂದ ಸಚಿನ್.
ಮೊಮ್ಮಗ ಸಚಿನ್ ಅಜ್ಜಿಯ ತ್ಯಾಗವನ್ನು ಹೊಗಳಿದ್ದಾರೆ.
ಬೆಳಗಾವಿಯ ಯುವಕ ಸಚಿನ್ ಕಳೆದ 18 ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ.
ವಿಜಯಪುರದಲ್ಲೇ ಮೊದಲ ಕಿಡ್ನಿ ಕಸಿ ಚಿಕಿತ್ಸೆ ಯಶಸ್ವಿಯಾಗಿದೆ.
ಅಜ್ಜಿ-ಮೊಮ್ಮಗನ ಮೂತ್ರಪಿಂಡ ಹೊಂದಾಣಿಕೆಯಾಗಿದೆ
ವಿಜಯಪುರದ ಯಶೋಧಾ ಎನ್ನುವ ಖಾಸಗಿ ಆಸ್ಪತ್ರೆ ಕಿಡ್ನಿ ಕಸಿಗೆ ಮಾನ್ಯತೆ ಪಡೆದುಕೊಂಡಿತ್ತು.
ಸದ್ಯ ಕಿಡ್ನಿ ಪಡೆದ ಸಚಿನ್ ಹಾಗೂ ಕಿಡ್ನಿ ದಾನ ಮಾಡಿದ ಅಜ್ಜಿ ಉದ್ದವ್ವ ಆರೋಗ್ಯವಾಗಿದ್ದಾರೆ.
ಕಿಡ್ನಿ ಕಸಿ ಮಾಡಿಸಿಕೊಂಡ ಯುವಕ ಸಚಿನ್ ತನ್ನ ಅಜ್ಜಿ ತನಗೆ ಪುನರ್ಜನ್ಮ ನೀಡಿದ್ದಾರೆ ಎಂದಿದ್ದಾರೆ