ಪಂಜುರ್ಲಿ ದೈವದ ಕಥೆ

ದೇವಲೋಕದಲ್ಲಿ ಹಂದಿಗಳ ಗುಂಪೊಂದು ಜೀವಿಸುತ್ತಿತ್ತು

ಒಮ್ಮೆ ಶಿವ ಪಾರ್ವತಿ ಮುಂದೆ ಈ ಹಂದಿಗಳ ಗುಂಪು ಕಾಣಿಸಿಕೊಳ್ಳುತ್ತೆ.

ಈ ಹಂದಿ ಗುಂಪುಗಳಲ್ಲಿ ಒಂದು ಮರಿ ಹಂದಿ ಶಿವನ ಪಾದದ ಬಳಿ ಹೋಗುತ್ತಂತೆ. 

ಹೀಗಾಗಿ ಆ ಹಂದಿ ಮರಿಯನ್ನು ಶಿವ ಪಾರ್ವತಿ ಪ್ರೀತಿಯಿಂದ ಸಾಕಿ, ಸಲಹುತ್ತಾರೆ.

ಆ ಹಂದಿ ಹೂವಿನ ತೋಟವೊಂದಕ್ಕೆ ನುಗ್ಗಿ ಅದನ್ನು ಹಾಳು ಮಾಡುತ್ತಂತೆ.

ಅದೇ ಕೋಪದಲ್ಲಿ ಯಾವುದೇ ಯೋಚನೆ ಮಾಡದೇ ಆ ಹಂದಿಯನ್ನು ಕೊಲ್ಲುತ್ತಾರೆ. 

Heading 3

ಇದನ್ನು ಕಂಡ ಪಾರ್ವತಿ ಶಿವನ ಬಳಿ ಜಗಳ ಮಾಡುತ್ತಾರಂತೆ. ಕೊನೆಗೆ ಶಿವ ಆ ಹಂದಿಗೆ ಮತ್ತೆ ಮರುಜೀವ ನೀಡುತ್ತಾರೆ. ನೀನು ಇಲ್ಲಿ ಇರಬೇಡ ಭೂ ಲೋಕಕ್ಕೆ ಹೋಗು ಎಂದು ಹೇಳಿ ಕಳುಹಿಸುತ್ತಾರೆ.

ಭೂ ಲೋಕಕ್ಕೆ ಬಂದಿದ್ದ ಹಂದಿ ಮೊದಲಿಗೆ ನೆಲ್ಯಾಡಿಬೀಡುಗೆ ಬಂದಿತ್ತು. ಅಲ್ಲಿನ ದೊಡ್ಡ ಮನೆತನಕ್ಕೆ ಈ ಹಂದಿ ಸಹಾಯ ಮಾಡಿತ್ತು. ಆಗ ಆ ಮನೆಯವರು ನಿನ್ನ ಹೆಸರೇನು ಎಂದು ಕೇಳುತ್ತಾರೆ.

ಅದಕ್ಕೆ ಹಂದಿ ತಾನು ಶಿವನ ಬಳಿ ಇದ್ದೆ, ಹೀಗೆ ಭೂ ಲೋಕಕ್ಕೆ ಹೋಗಿ ಜನರ ರಕ್ಷಣೆ ಮಾಡು ಎಂದು ಇಲ್ಲಿಗೆ ಕಳುಹಿಸಿದ್ದಾರೆ. ನನಗೆ ಹೆಸರಿಲ್ಲ, ಅಣ್ಣಪ್ಪ ಎಂದು ಕರೆಯಿರಿ ಎಂದು ಹಂದಿ ಹೇಳುತ್ತಂತೆ.