Tirumala ತಿಮ್ಮಪ್ಪನ ದರ್ಶನ 2 ದಿನ ಬಂದ್!

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಪ್ಲ್ಯಾನ್ ಮಾಡಿದ್ದೀರಾ?

ಎರಡು ದಿನಗಳ ಕಾಲ ತಿರುಮತಿ ವೆಂಕಟೇಶ್ವರನ ದರ್ಶನವನ್ನು ಸ್ಥಗಿತಗೊಳಿಸಲಾಗುತ್ತಿದೆ

ಈ ಕುರಿತು ಟಿಟಿಡಿ ಅಧಿಕೃತ ಮಾಹಿತಿ ನೀಡಿದೆ

ಯುಗಾದಿ ಹಬ್ಬದ ಸಮಯದಲ್ಲಿ ಮಾರ್ಚ್ 21 ಮತ್ತು 22 ರಂದು ವಿಐಪಿ ಬ್ರೇಕ್ ದರ್ಶನವನ್ನು ರದ್ದುಗೊಳಿಸಲಾಗಿದೆ

ತಿರುಮಲದಲ್ಲಿ ಪ್ರತಿ ವರ್ಷ ಯುಗಾದಿ ದಿನದಂದು ಯುಗಾದಿ ಆಸ್ಥಾನ ಆಚರಣೆಗಳು ನಡೆಯುತ್ತವೆ

ಈ ಬಾರಿಯೂ ಮಾರ್ಚ್ 22ರಂದು ಈ ಆಚರಣೆ ನಡೆಯಲಿದೆ

ಈ ಹಿನ್ನೆಲೆಯಲ್ಲಿ ತಿಮ್ಮಪ್ಪನ ದರ್ಶನದಲ್ಲಿ ಬದಲಾವಣೆ ಮಾಡಲಾಗಿದೆ

ಪಾದಚಾರಿ ಮಾರ್ಗದ ಮೂಲಕ ತಿರುಮಲ ತಲುಪುವ ಭಕ್ತರ ಅನುಕೂಲಕ್ಕಾಗಿ ದಿವ್ಯ ದರ್ಶನ ಟೋಕನ್ ನೀಡಲು ನಿರ್ಧರಿಸಲಾಗಿದೆ ಎಂದು ಟಿಟಿಡಿ ಮಾಹಿತಿ ನೀಡಿದೆ

ಈಗಾಗಲೇ ಟಿಕೆಟ್ ಹೊಂದಿರುವ ಭಕ್ತರಿಗೆ ಮತ್ತೆ ದಿವ್ಯ ದರ್ಶನ ಟಿಕೆಟ್ ನೀಡುವುದಿಲ್ಲ ಎಂದು ಸಹ ಟಿಟಿಡಿ ತಿಳಿಸಿದೆ