Uchchangemma ದೇವಾಲಯಕ್ಕೆ ಹರಿದುಬಂದ ಜನಸಾಗರ!

ಭರತ ಹುಣ್ಣಿಮೆ ಹಿನ್ನೆಲೆ ಉಚ್ಚಂಗೆಮ್ಮ ದೇವಸ್ಥಾನಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರ ಆಗಮನ

ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದ ಐತಿಹಾಸಿಕ ಪ್ರಸಿದ್ಧ ಉಚ್ಚಂಗೆಮ್ಮ ದೇವಸ್ಥಾನ

ಉಚ್ಚಂಗೆಮ್ಮ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿ  ದರ್ಶನ ಪಡೆದರು

ರಾಜ್ಯದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೇ ನೆರೆ ರಾಜ್ಯಗಳಿಂದಲೂ ಭಕ್ತರು ಆಗಮಿಸಿದ್ದರು

ಬಿರು ಬಿಸಿಲ ನಡುವೆಯೂ ಭಕ್ತರ ಉಧೋ... ಉಧೋ.. ಹರ್ಷೋದ್ಘಾರ ಮುಗಿಲು ಮುಟ್ಟಿತ್ತು

ದೇವಿ ದರ್ಶನದ ಬಳಿಕ ಬೆಟ್ಟದ ಆನೆ ಹೊಂಡದ ಬಳಿ ಭಕ್ತರು ಪಡ್ಲಿಗೆಗೆ ಪೂಜೆ ಸಲ್ಲಿಸಿದರು

ಹುಣ್ಣಿಮೆ ಅಂಗವಾಗಿ ದೇವಿಗೆ ಕುಂಕುಮಾರ್ಚನೆ, ಎಲೆ ಪೂಜೆ, ಹೊಳೆ ಪೂಜೆ, ಕ್ಷೀರಾಭಿಷೇಕ ನೆರವೇರಿತು

ಭಕ್ತರು ದೇವಿಗೆ ರೊಟ್ಟಿ, ಬದನೆಕಾಯಿ ಪಲ್ಯೆ, ಮೊಸರು ಅನ್ನದ ಉಂಡೆಗಳ ನೈವೇದ್ಯ ಅರ್ಪಿಸಿದರು 

ಶೌಚಾಲಯ, ಕುಡಿಯುವ ನೀರು, ವಿದ್ಯುತ್, ಆರೋಗ್ಯ ಸೇರಿದಂತೆ ಮೂಲ ಸೌಕರ್ಯ ಒದಗಿಸಲಾಗಿತ್ತು