ಮನೆಯೊಂದು 101 ಬಾಗಿಲು! ಕಲಬುರಗಿಯಲ್ಲೊಂದು ವಿಶಿಷ್ಟ ಮನೆ
ಇಲ್ಲೊಂದು ಮನೆಗೆ ಮೂರು, ಆರೂ ಅಲ್ಲ ಬರೋಬ್ಬರಿ 101 ಬಾಗಿಲುಗಳು.
ಒಂದು ಕೋಣೆಯಿಂದ ಒಳಗಡೆ ಹೋದ್ರೆ ಇನ್ನೊಂದು ಕೋಣೆಯಲ್ಲಿ ಹೊರಬರ್ತೀರಿ.
ಕೋಣೆಯೊಳಗೊಂದು ಕೋಣೆ, ಬಾಗಿಲು ತೆರೆಯುತ್ತಾ ಹೋದಂತೆ ಹೆಚ್ಚುತ್ತಾ ಹೋಗುವ ಬಾಗಿಲು.
ಅದ್ಭುತ ರಚನೆಯ ಈ ಮನೆ ಇರೋದು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಬಿರಾಳ ಗ್ರಾಮದಲ್ಲಿ.
ಈ 101 ಬಾಗಿಲುಗಳ ಮನೆಯ ಕಲಾಕೃತಿಯ ಕೆತ್ತನೆ ಬಲು ಸುಂದರವಾಗಿದೆ.
ಮನೆಯ ಅಡುಗೆ ಮನೆಯಲ್ಲಿ ಬೃಹತ್ ಆಕಾರದ ಮೂರ್ನಾಲ್ಕು ಒಲೆಗಳಿವೆ.
ಒಂದು ಕಾಲದಲ್ಲಿ ಭವ್ಯ ಬಂಗಲೆಯಂತಿದ್ದ ಮನೆ ಈಗ ಅವನತಿಯತ್ತ ಸಾಗಿರುವುದೂ ಕಂಡುಬರ್ತಿವೆ.
40 ವರ್ಷಗಳ ಹಿಂದೆ ಮಲ್ಲಣಗೌಡ ಇಟಗಿ ಎಂಬವರು ಕಟ್ಟಿಸಿದ ಈ ಮನೆ ಅದ್ಭುತ ರಚನೆಯನ್ನೂ ಹೊಂದಿದೆ.
ಈ ಮನೆ ಸುಮಾರು 3 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ.