ತನ್ನ ಹೆಂಡತಿಯ ಮನೆಯವರು ಚಿನ್ನದ ಗಿಫ್ಟ್ ಕೊಡಬೇಕು ಎಂದು ವಿದ್ಯುತ್ ಕಂಬ ಏರಿದ ವ್ಯಕ್ತಿ!
ತೆಲಂಗಾಣದ ಮೇದಕ್ ಪುರಸಭೆ ವ್ಯಾಪ್ತಿಯ ಗಾಂಧಿನಗರದ 18ನೇ ವಾರ್ಡ್ನಲ್ಲಿ ಈ ಘಟನೆ ನಡೆದಿದೆ.
ಶೇಖರ್ ಎಂಬ ವ್ಯಕ್ತಿ ತನಗೆ ಅತ್ತೆ ಬಂಗಾರ ಕೊಡಿಸಿಲ್ಲ ಎಂದು ವಿಶೇಷ ರೀತಿಯಲ್ಲಿ ಸ್ಟ್ರೈಕ್ ಮಾಡಿದ್ದಾರೆ.
ಹೀಗೆ ಪ್ರತಿಭಟನೆ ಮಾಡಿ ಶೇಖರ್ ತನ್ನ ಅತ್ತೆಯ ಬಳಿ ಚಿನ್ನಕ್ಕಾಗಿ ಬೇಡಿಕೆಯಿಟ್ಟಿದ್ದಾರೆ.
ಅತ್ತೆಗೆ ಚಿನ್ನ ಕೊಡಿಸುವಂತೆ ವಿದ್ಯುತ್ ಕಂಬ ಹತ್ತಿದ ಅಳಿಯ ಪ್ರತಿಭಟನೆ ಮಾಡಿದ್ದಾರೆ
ಈತ ಭಾನುವಾರ ತನ್ನ ಪತ್ನಿಯೊಂದಿಗೆ ವಾಸವಿದ್ದ ಸ್ಥಳದಲ್ಲಿಯೇ ವಿದ್ಯುತ್ ಕಂಬ ಏರಿದ್ದಾನೆ.
ಇದನ್ನು ನೋಡಿದ ವಿದ್ಯುತ್ ಇಲಾಖೆಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ.
ಈ ವ್ಯಕ್ತಿಯನ್ನು ರಕ್ಷಿಸಲು ಅಧಿಕಾರಿಗಳು ವಿದ್ಯುತ್ ಕಂಬಕ್ಕೆ ವಿದ್ಯುತ್ ಸಂಪರ್ಕವನ್ನು ನಿಲ್ಲಿಸಿದ್ದಾರೆ
ಡಿಎಸ್ಪಿ ಸ್ಥಳಕ್ಕೆ ಧಾವಿಸಿ ಬಂದು ಅಳಿಯ ಶೇಖರ್ಗೆ ಮನವರಿಕೆ ಮಾಡಿದ ಬಳಿಕ ಶೇಖರ್ ಕಂಬದಿಂದ ಇಳಿದಿದ್ದಾರೆ.
ಪೊಲೀಸರು ಶೇಖರ್ ನನ್ನು ಠಾಣೆಗೆ ಸ್ಥಳಾಂತರಿಸಿ ಕೌನ್ಸೆಲಿಂಗ್ ಮಾಡಿದ್ದಾರೆ.