ಕುಡಿತ ಬಿಟ್ಟ ಖುಷಿಗೆ ಹಬ್ಬ ಮಾಡಿದ ವ್ಯಕ್ತಿ!

ಮನೋಹರ್ ಕುಡಿತ ಬಿಟ್ಟ ಖುಷಿಗೆ ಇಡೀ ಊರಲ್ಲಿ ಪೋಸ್ಟರ್ ಹಾಕಿದ್ದಾರೆ

ತಮಿಳುನಾಡಿನ ವ್ಯಕ್ತಿಯೊಬ್ಬರು ಈ ಹೊಸ ಟ್ರೆಂಡ್ ಆರಂಭಿಸಿದ್ದಾರೆ.

ಮನೋಹರನ್ ಎಂಬ 53 ವರ್ಷದ ವ್ಯಕ್ತಿ ತಮಿಳುನಾಡಿನಲ್ಲಿ ವಾಸಿಸುತ್ತಿದ್ದಾರೆ.

32 ವರ್ಷಗಳಿಂದ ಮದ್ಯವ್ಯಸನಿಯಾಗಿದ್ದ ಮನೋಹರನ್ ಕಳೆದ ವರ್ಷ ಮದ್ಯಪಾನ ತ್ಯಜಿಸಲು ನಿರ್ಧರಿಸಿದ್ದರು.

ಮನೋಹರನ್ ಅವರು ಮದ್ಯಪಾನದಿಂದ ದೂರವಿರುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.

ಮನೋಹರ್ ಕುಡಿತ ಬಿಟ್ಟು ಪಟ್ಟಣದಾದ್ಯಂತ ಪೋಸ್ಟರ್ಗಳನ್ನು ಹಾಕಿದರು.

ಮದ್ಯಕ್ಕೆ ನಿತ್ಯ 300 ರಿಂದ 400 ರೂ. ಖರ್ಚಾಗುತ್ತಿತ್ತಂತೆ. ಕೊನೆಗೆ ತನ್ನ ಮನೆಯನ್ನೂ ಮಾರಿದ್ದರಂತೆ ಇವರು

ಈಗ ಇವರು ಕುಡಿತ ಬಿಟ್ಟಿದ್ದು, ಸಮಾಜದಲ್ಲಿ ಗೌರವ ಸಿಗುತ್ತಿದೆ ಎನ್ನುತ್ತಾರೆ ಈ ವ್ಯಕ್ತಿ

ಒಟ್ಟಿನಲ್ಲಿ ಮನೋಹರ್ ಕುಡಿತ ಬಿಟ್ಟು ಅತೀ ಸಂತೋಷದಿಂದ ಇದ್ದಾರೆ.