ಸಾಮಾನ್ಯವಾಗಿ ಎಲ್ಲಾ ಅಂತರರಾಷ್ಟ್ರೀಯ ಮಟ್ಟದ ಟಿವಿ ಕಂಪನಿಗಳು ಮಾಡುವಂತೆ ಸ್ಮಾರ್ಟ್ ಟಿವಿಗೆ ಬೇಕಾದಂತಹ ಸ್ಲ್ರೀನ್ ,ಬೋರ್ಡ್, ಬ್ಯಾಕ್ ಲೈಟ್ ಮೊದಲಾದ ಬಿಡಿ ಭಾಗಗಳು ಫ್ಯಾಕ್ಟರಿಗಳಲ್ಲಿ ತಯಾರಾಗುತ್ತದೆ.
ಈ ಬಿಡಿ ಭಾಗಗಳನ್ನು ಜೋಡಿಸಿ ಬೃಹತ್ ಟಿವಿ ಕಂಪನಿಗಳು ಅವರವರ ಬ್ಯಾಂಡ್ ಮಾಡಿಕೊಂಡು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತವೆ.
ಇದೇ ರೀತಿಯಲ್ಲಿ ಸತ್ಯಶಂಕರ್ ತಮ್ಮದೇ ಆದ ಎಸ್.ಟಿ.ವಿ.ಸಿ ಎನ್ನುವ ಹೆಸರಿನ ಟಿವಿಯನ್ನು ಸಿದ್ಧಪಡಿಸಿದ್ದಾರೆ.
ಈ ಟಿವಿಯನ್ನು ಗ್ರಾಹಕರ ಅವಶ್ಯಕತೆಗೆ ತಕ್ಕಂತೆ ಪರಿವರ್ತನೆ ಮಾಡಿಕೊಡುವ ಆಪ್ಷನ್ ಅನ್ನೂ ಸತ್ಯಶಂಕರ್ ನೀಡಿದ್ದಾರೆ.
ಸ್ಕ್ರೀನ್, ಮದರ್ ಬೋರ್ಡ್ ಹೊರತುಪಡಿಸಿ ಎಚ್.ಡಿ ಇನ್ಪುಟ್, ಔಟ್ ಪುಟ್ ಗಳನ್ನು ಗ್ರಾಹಕರಿಗೆ ಬೇಕಾಗುವಷ್ಟು ಮಾಡಿಕೊಡುತ್ತಿದ್ದಾರೆ.
ಈ ಟಿವಿ ದಕ್ಷಿಣ ಕನ್ನಡದ ಹವಾಮಾನವನ್ನು ಹೊಂದಿಕೊಂಡು ನಿರ್ಮಿಸಲಾಗಿದೆ.
ದಕ್ಷಿಣಕನ್ನಡ ಜಿಲ್ಲೆ ಹೆಚ್ಚಾಗಿ ತೇವಾಂಶ ಹೊಂದಿದ ಹವಾಮಾನವನ್ನು ಹೊಂದಿರುವುದರಿಂದ ಬಹುತೇಕ ಕಂಪನಿಗಳ ಟಿವಿ ಹೆಚ್ಚಿನ ಕಾಲ ಬಾಳಿಕೆ ಬರುತ್ತಿಲ್ಲ.
ತಮ್ಮ ಟಿವಿಯನ್ನು ಗ್ರಾಹಕರಿಗೆ ಹೆಚ್ಚಿನ ಹೊರೆಯಿಲ್ಲದೆ,ಕೈಗೆಟಕುವ ದರದಲ್ಲಿ ನೀಡಲಾಗುವುದು ಎಂದು ಸತ್ಯಶಂಕರ್ ತಿಳಿಸಿದ್ದಾರೆ.