Sumalatha Ambareesh ಬೆಂಬಲ ಯಾರಿಗೆ?
ಹಲವಾರು ವದಂತಿಗಳ ಮಧ್ಯೆ ಕೊನೆಗೂ ಸುಮಲತಾ ಅಂಬರೀಶ್ ರಾಜಕೀಯ ನಡೆ ಏನೆಂಬುವುದು ಸ್ಪಷ್ಟವಾಗಿದೆ
ಸುದ್ದಿಗೋಷ್ಠಿ ನಡೆಸಿದ ಅಂಬಿ ಪತ್ನಿ ಬಿಜೆಪಿಗೆ ತಮ್ಮ ಬೆಂಬಲ ಘೋಷಿಸಿದ್ದಾರೆ
ಇದೇ ವೇಳೆ ಮಂಡ್ಯವನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂಬುವುದನ್ನು ಸ್ಪಷ್ಟಪಡಿಸಿದ್ದಾರೆ
ಮಹತ್ವದ ಸುದ್ದಿಗೋಷ್ಠಿ ನಡೆಸಿದ ಸುಮಲತಾ ಅಂಬರೀಶ್ ನಿರೀಕ್ಷೆಯಂತೆ ತಮ್ಮ ಬೆಂಬಲವನ್ನು ಪಿಎಂ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಘೋಷಿಸಿದ್ದಾರೆ
ಇದೇ ವೇಳೆ ಪರೋಕ್ಷವಾಗಿ ಎಚ್ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ
ಈ ಹಿಂದೆಯೇ ತಾಂತ್ರಿಕ ಕಾರಣ ಹಾಗೂ ಕಾನೂನು ತೊಂದರೆಗಳಿಂದ ಸುಮಲತಾ ಅಂಬರೀಶ್ ಬಿಜೆಪಿಗೆ ಸೇರ್ಪಡೆಯಾಗೋದು ಅನುಮಾನ ಎಂದು ಹೇಳಲಾಗಿತ್ತು
ಆದರೆ ಅವರು ತಮ್ಮ ಬೆಂಬಲ ಕಮಲ ಪಾಳಯಕ್ಕೆ ನೀಡುವ ಸಾಧ್ಯತೆ ಇದೆ ಎನ್ನಲಾಗಿತ್ತು
ಸುದ್ದಿಗೋಷ್ಠಿಯಲ್ಲಿ ಮಂಡ್ಯ ಕ್ಷೇತ್ರಾಭಿವೃದ್ಧಿ ಬಗ್ಗೆ ಮಾತನಾಡಿದ ಅಂಬಿ ಪತ್ನಿ ತಾನು ಸ್ವಾರ್ಥಿಯಾಗಿದ್ದರೆ ಅವಕಾಶವನ್ನು ಬಳಸಿ ತನ್ನ ಲಾಭಕ್ಕಾಗಿ ಕೆಲಸ ಮಾಡಬಹುದಿತ್ತು
ಆದರೆ ನನ್ನ ಯೋಚನೆ ಅದಾಗಿರಲಿಲ್ಲ. ಕ್ಷೇತ್ರವೇ ನನ್ನ ಪಾಲಿಗೆ ಮುಖ್ಯವಾಗಿತ್ತು ಎಂದಿದ್ದಾರೆ