ದೃಷ್ಟಿ ಸಮಸ್ಯೆ ಇದ್ರೂ CA ಪರೀಕ್ಷೆಯಲ್ಲಿ ಸಾಧನೆ!

ಈ ಮೂವರು ನಮ್ಮಂತೆ ಸಾಮಾನ್ಯರಲ್ಲ

ಈ ತ್ರಿವಳಿ ಅಣ್ಣ ತಮ್ಮಂದಿರ ಸಾಧನೆ ಮಾತ್ರ ಅಸಾಮಾನ್ಯದ್ದು

ಈ ತ್ರಿವಳಿಗಳು ದಕ್ಷಿಣ ಕನ್ನಡದ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಕಾಮರ್ಸ್ ವಿದ್ಯಾರ್ಥಿಗಳು

ಜೀವನ್, ಜಿತೇಶ್ ಹಾಗೂ ಜಯೇಶ್ ಈ ಮೂವರು ತ್ರಿವಳಿಗೆ ಶೇಕಡಾ 90 ರಷ್ಟು ದೃಷ್ಟಿಯ ಸಮಸ್ಯೆ ಇದೆ

ಕೇವಲ ಹತ್ತು ಪ್ರತಿಶತ ಮಾತ್ರ ನೋಡಬಲ್ಲರು

ಆದ್ರೆ ಇದ್ಯಾವುದೂ ಈ ಮೂವರು ಸಹೋದರರ ಸಾಧನೆಗೆ ಯಾವ ಅಡ್ಡಿಯನ್ನುಂಟು ಮಾಡಿಲ್ಲ

ಈ ಮೂವರು ಅಣ್ಣ ತಮ್ಮಂದಿರು ಸಿಎ ಮೊದಲ ಹಂತದ ಪರೀಕ್ಷೆಯಲ್ಲಿ ಸಕ್ಸಸ್ ಕಂಡಿದ್ದಾರೆ

ಈ ಮೂಲಕ ಸಿಎ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ರಾಷ್ಟ್ರ ಮಟ್ಟದಲ್ಲಿ ತಮ್ಮ ಛಾಪು ಮೂಡಿಸಲು ತಯಾರಾಗಿದ್ದಾರೆ

ಹಾಸ್ಟೆಲ್​ನಲ್ಲಿ ಜೊತೆಗೇ ಇದ್ದು ಓದುವ ಇವರು ಬೇರೆ ಯಾವುದೇ ಹೆಚ್ಚುವರಿ ಕೋಚಿಂಗ್ ಪಡೆದಿಲ್ಲ