ಇವರು ಕೇವಲ ಜಿಲೇಬಿ ಮಿಠಾಯಿ ಮಾರಾಟ ಮಾಡಿ ಹಣ ಗಳಿಸಿ ಉದ್ಯಮ ಇಂಪ್ರೂವ್ ಮಾಡಿಕೊಳ್ಳೋದಕ್ಕೆ ಮಾತ್ರ ಸೀಮಿತರಾದವರಲ್ಲ
ಬದಲಿಗೆ, ಕುಮಟಾದಲ್ಲಿ ನೆಲ್ಲಿಕೆರಿಯ ಬೆಣ್ಣೆ ಸರ್ಕಾರಿ ಕಾಲೇಜೊಂದನ್ನ ಕಟ್ಟಿಸಿದ್ರೆ, ಕಾರವಾರದಲ್ಲಿ ರಮಾಬಾಯಿ ಹನುಮಂತ ಬೆಣ್ಣೆ ಇಂಗ್ಲೀಷ್ ಮೀಡಿಯಮ್ ಹೆಸರಿನ ಹೈಸ್ಕೂಲ್ ಕಟ್ಟಿಸಿದ್ದಾರೆ
ಹೀಗೆ ಬಿ.ಕಾಂ ಪದವೀಧರನಾಗಿರುವ ವಾಸುದೇವ್ ನಾಯ್ಕ್ ಅವರು ಊರಿಗೆಲ್ಲ ಶಿಕ್ಷಣ ಸಂಸ್ಥೆ ಮೂಲಕ ಸಿಹಿ ಹಂಚಿದ್ದಾರೆ
ಪರೋಪಕಾರಿಯಾಗಿ ಜೀವನ ನಡೆಸುತ್ತಾ, ಸಮಾಜಕ್ಕಾಗಿ ಬದುಕುತ್ತಿದ್ದಾರೆ
ಈ ಎರಡೂ ವಿದ್ಯಾಸಂಸ್ಥೆಗಳು ಅದೆಷ್ಟೋ ಮಕ್ಕಳ ಬದುಕಿಗೆ ಭವಿಷ್ಯ ಕಟ್ಟಿಕೊಟ್ಟಿದೆ
ವಾಸುದೇವ್ ನಾಯ್ಕ್ ಅವರು ಕೇವಲ ಸಿಹಿ ಉದ್ಯಮದಲ್ಲಿ ಹಣ, ಹೆಸರು ಗಳಿಸಿಕೊಳ್ಳದೇ, ಊರು ಪರವೂರ ಮಕ್ಕಳ ಶಿಕ್ಷಣಕ್ಕೆ ಬೇಕಾದ ವಿದ್ಯಾಮಂದಿರ ಕಟ್ಟುವ ಮೂಲಕ ಜನಮಾನಸದಲ್ಲಿ ‘‘ಸಿಹಿ ವ್ಯಾಪಾರಿ ಪರೋಪಕಾರಿ‘‘ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ