ಕಾರಿಗೆ ಡಿಕ್ಕಿ ಹೊಡೆದು ಕಾರಿನ ಬಂಪರ್ ಒಳಗೆ ಹೊಕ್ಕಿದ್ದ ನಾಯಿ ಭಾರೀ ವೈರಲ್ ಆಗಿತ್ತು
ಇದೀಗ ಈ ನಾಯಿಯನ್ನು ಹುಡುಕಿ ಅದರ ಮರಿಗಳ ಜೊತೆ ಬಿಡಲಾಗಿದೆ
ಪುತ್ತೂರಿನ ಕಬಕ ನಿವಾಸಿ ಸುಬ್ರಹ್ಮಣ್ಯ ದಂಪತಿಗಳು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಪುತ್ತೂರಿಗೆ ವಾಪಾಸಾಗುತ್ತಿದ್ದ ದಾರಿ ಮಧ್ಯೆ ಬಳ್ಪ ಎಂಬಲ್ಲಿ ನಾಯಿ ಕಾರಿಗೆ ಡಿಕ್ಕಿಯಾಗಿತ್ತು
ಕಾರು ಸವಾರರು ಇಳಿದು ನೋಡಿದರೆ ನಾಯಿ ಎಲ್ಲೂ ಪತ್ತೆಯಾಗಿರ್ಲಿಲ್ಲ. ಆದ್ರೆ ನಾಯಿ ಬಂಪರ್ನಲ್ಲಿತ್ತು!
ಇದೇ ನಾಯಿ ಬಳ್ಪ ಅರಣ್ಯ ವಲಯದ ಉಪ ವಲಯ ಅರಣ್ಯಾಧಿಕಾರಿಯ ಮನೆಗೆ ಬರುತ್ತಿತ್ತು
ಮನೆಗೆ ಬರುತ್ತಿದ್ದ ನಾಯಿಗೆ ಅರಣ್ಯಾಧಿಕಾರಿ ಸಂತೋಷ್ ರೈ ಅವರ ಐದು ವರ್ಷ ಪ್ರಾಯದ ಮಗಳು ತಿಂಡಿ ಹಾಕುತ್ತಿದ್ದಳು
ಆದ್ರೆ ಈ ನಾಯಿ ತನಗೆ ಡಿಕ್ಕಿಯಾದ ಕಾರಿನೊಂದಿಗೆ ಸೇರಿ ಪುತ್ತೂರು ಸೇರಿತ್ತು. ಮರಿಗಳನ್ನು ಬಿಟ್ಟು ಪುತ್ತೂರು ಸೇರಿದ್ದ ನಾಯಿಗಾಗಿ ಅರಣ್ಯಾಧಿಕಾರಿಯ ಮಗಳು ಹಾತೊರೆದಿದ್ದಳು
ನಾಯಿಯನ್ನು ಮರಳಿ ತರುವಂತೆ ತಂದೆಯ ಮುಂದೆ ಪಟ್ಟು ಹಿಡಿದಿದ್ದಳು
ಇದೇ ವೇಳೆ ಕಾರಿಗೆ ನಾಯಿ ಡಿಕ್ಕಿ ಹೊಡೆದು ಬಂಪರ್ ಸೇರಿ 70 ಕಿಲೋ ಮೀಟರ್ ಸಂಚರಿಸಿದ ಘಟನೆ ಭಾರೀ ವೈರಲ್ ಆಗಿತ್ತು
ಈ ಸುದ್ದಿ ಕೇಳಿದ ಅರಣ್ಯಾಧಿಕಾರಿ ನಾಯಿ ಇರುವ ಸ್ಥಳ ಪತ್ತೆ ಮಾಡಿದ್ದಾರೆ
ನಾಯಿ ಮೇಲಿನ ಮಗಳ ಪ್ರೀತಿಗೆ ಸೋತ ಅರಣ್ಯಾಧಿಕಾರಿ ಕೊನೆಗೂ ನಾಯಿಗಾಗಿ ಪುತ್ತೂರಿಗೆ ಹೋಗಿದ್ದಾರೆ
ಪುತ್ತೂರಿನ ಮನೆಯೊಂದರ ಪಕ್ಕ ನಾಯಿ ಇರುವ ಬಗ್ಗೆ ಗೊತ್ತಾಗಿ ನಾಯಿಯನ್ನು ಮತ್ತೆ ಅದರ ಮರಿಗಳ ಜೊತೆ ಒಂದುಗೂಡಿಸಿದ್ದಾರೆ
ನಾಯಿಮರಿಗಳು ತನ್ನ ತಾಯಿಯ ಮಡಿಲು ಸೇರಿದ್ದು ಕಂಡು ಅರಣ್ಯಾಧಿಕಾರಿ ಸಂತೋಷ್ ರೈ ಅವರ ಮಗಳು ಖುಷ್ ಆಗಿದ್ದಾಳೆ