ಬೆಂಕಿಯಲ್ಲಿ ಬೀಳೋ ಮೂಕಾಂಬಿಕಾ ಗುಳಿಗ!

ಕರಾವಳಿ ಭಾಗದಲ್ಲಿ ಸುಮಾರು 400 ಕ್ಕೂ ಹೆಚ್ಚು ವಿವಿಧ ಪ್ರಕಾರದ ದೈವಗಳನ್ನು ಆರಾಧಿಸಲಾಗುತ್ತಿದೆ

ವರ್ಷಕ್ಕೆ ಒಂದು ದಿನ ಈ ದೈವಗಳಿಗೆ ಕೋಲ ನೆರವೇರಿಸಲಾಗುತ್ತೆ

ಕೊಲ್ಲೂರಿನಲ್ಲಿ ದೇವಿಯು ಅವತಾರವೆತ್ತಿ, ಮೂಕಾಸುರನೆಂಬ ರಾಕ್ಷಸನ ವಧೆ ಮಾಡುವ ಸಂದರ್ಭದಲ್ಲಿ

ಮೂಕಾಸುರನ ವಧೆ ಮಾಡಿದ ಮಾರಣಕಟ್ಟೆಯಲ್ಲಿ ಶಿವಧೂತನಾದ ಗುಳಿಗ ಅದೇ ಸ್ಥಳದಲ್ಲಿ ನೆಲೆಸಿದ್ದರು

ಶಿವನ ಹಾಗೂ ದೇವಿಯ ಪ್ರೀತಿ ಪಾತ್ರನಾದ ಗುಳಿಗರಿಗೆ ದೇವಿಯ ಅನುಗ್ರಹದಿಂದ

ಬ್ರಹ್ಮಲಿಂಗೇಶ್ವರನಾಗಿ ಆರಾಧನೆಗೆ ಪಾತ್ರವಾದ ಮೂಕಾಸುರನ ಬಲಭಾಗದಲ್ಲಿ ಗುಳಿಗನಿಗೂ ಆರಾಧನೆ ಮಾಡುವಂತೆ ದೇವಿ ಆಜ್ಞೆಯನ್ನು ನೀಡಿದ್ದಳಂತೆ

ಈ ನಡುವೆ ಕೊಲ್ಲೂರಿನ ತಂತ್ರಿಯೋರ್ವರು ಕೇರಳಕ್ಕೆ ಶಾಂತಿಪೂಜೆ ನೆರವೇರಿಸಲು ತಮ್ಮ ಪತ್ನಿಯೊಂದಿಗೆ ಹೊರಟಿದ್ದರು

ಈ ಸಂದರ್ಭದಲ್ಲಿ ಗುಳಿಗ ದೈವವೂ ತಂತ್ರಿಯವರ ರಕ್ಷಣೆಗಾಗಿ ಕೇರಳಕ್ಕೆ ಹೊರಟಿತ್ತು

ಕೇರಳ ಬರುವ ಮಾರ್ಗ ಮಧ್ಯೆ ತಂತ್ರಿಯವರ ಪತ್ನಿ ಮೂಕಾಂಬಿಕೆಯನ್ನು ವ್ಯಕ್ತಿಯೋರ್ವ ಅತ್ಯಾಚಾರ ನಡೆಸಲು ಯತ್ನಿಸುತ್ತಾನೆ

ಇದರಿಂದ ನೊಂದ ಮೂಕಾಂಬಿಕೆ ನೀರಿಗೆ ಹಾರಿ ಆತ್ಮಹತ್ಯೆ ಮಾಡಿದ ಸಂದರ್ಭದಲ್ಲಿ ಆಕೆಯ ಆತ್ಮ ಗುಳಿಗ ದೈವದೊಂದಿಗೆ ಸೇರಿಕೊಳ್ಳುತ್ತದೆ

ಗುಳಿಗನೊಂದಿಗೆ ಸೇರಿಕೊಂಡ ಮೂಕಾಂಬಿಕೆ ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯ ಇಡೀ ಕುಟುಂಬವನ್ನೇ ನಾಶ ಮಾಡುತ್ತಾಳೆ

ಬಳಿಕ ಆಕೆ ಮೂಕಾಂಬಿಕಾ ಗುಳಿಗನಾಗಿ ಆರಾಧಿಸಲ್ಪಡುವ ಮೂಲಕ ಕರಾವಳಿಯ ಅತ್ಯಂತ ಪ್ರಭಾವಿ ದೈವವಾಗಿ ಗುರುತಿಸುತ್ತಾಳೆ