Oscar ಗೆದ್ದ ಆನೆ ದಂಪತಿಗೆ ಸಿಕ್ಕಿದ್ದು ಹೀಗೆ
ಹೊಸೂರು ಸಮೀಪದ ತೊಳ್ವಪೇಟಾ ಎಂಬ ಗ್ರಾಮದ ಬಳಿ ರಾತ್ರಿ ವೇಳೆ ವಿದ್ಯುತ್ ಸ್ಪರ್ಶಿಸಿ ಹೆಣ್ಣಾನೆ ಸಾವನ್ನಪ್ಪಿತ್ತು
ಉಳಿದ ಕಾಡಾನೆಗಳು ಕಾಡಿನತ್ತ ಮರಳಿದ್ದವು. ಮರಿ ಆನೆ ತಾಯಿ ಬಳಿ ರೋಧಿಸುತ್ತಿತ್ತು
ಅಂದು ಅನಾಥವಾಗಿದ್ದ ಆನೆ ಮರಿ ಕಥೆ ಇಂದು ಆಸ್ಕರ್ ಪ್ರಶಸ್ತಿ ಪಡೆದು ವಿಶ್ವವಿಖ್ಯಾತಿ ಗಳಿಸಿದೆ
ಗ್ರಾಮದೊಳಗೆ ಓಡಾಡುತ್ತಿದ್ದ ಆನೆ ಮರಿಯನ್ನು ರಕ್ಷಿಸಿದ್ದ ಗ್ರಾಮಸ್ಥರು ಹಾಲು ಆಹಾರ ನೀಡಿ ಆರೈಕೆ ಮಾಡಿದ್ದರು
ಈ ವಿಷಯ ತಿಳಿದ ಡೆಂಕಣಿಕೊಟ್ಟೈ ಅರಣ್ಯ ಇಲಾಖೆ ಅಧಿಕಾರಿಗಳು ಆನೆ ಮರಿಯನ್ನು ರಕ್ಷಣೆ ಮಾಡಿ ಕಾಡಾನೆಗಳು ಹಿಂಡು ಹಿಂಡಾಗಿ ಓಡಾಡುವ ಪ್ರದೇಶದಲ್ಲಿ ಗುಂಪಿಗೆ ಸೇರಿಸಲು ಯತ್ನಿಸಿದ್ದರು
ಆದರೆ, ಮರಿ ಆನೆಯನ್ನು ಕಾಡಾನೆಗಳು ತಮ್ಮ ಹಿಂಡಿಗೆ ಸೇರಿಸಿಕೊಂಡಿರಲಿಲ್ಲ
ಹೀಗಾಗಿ ಆನೆ ಮರಿ ಸಮೀಪದ ತಿಪ್ಪಸಂದ್ರಂ ಗ್ರಾಮಕ್ಕೆ ತೆರಳಿದ್ದು, ಬೀದಿನಾಯಿಗಳ ಗುಂಪು ಆನೆ ಮರಿ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದವು
ಮರಿ ಆನೆಯ ಆರೋಗ್ಯ ಕೆಟ್ಟಿತ್ತು. ಇದೆ ಸಂದರ್ಭದಲ್ಲಿ ಮುದುಮಲೈನ ಪೊಮ್ಮನ್ ಎಂಬ ಮರಿ ಆನೆಗೆ ಆರೋಗ್ಯ ಹದಗೆಟ್ಟಿತ್ತು
ಪೊಮ್ಮನ್ ಜೊತೆ ಮರಿ ಆನೆಗೂ ಒಂದು ವಾರಕ್ಕೂ ಹೆಚ್ಚು ಕಾಲ ಚಿಕಿತ್ಸೆ ನೀಡಲಾಗಿತ್ತು. ಅದೃಷ್ಟವೆಂಬಂತೆ ಆನೆ ಮರಿ ಆರೋಗ್ಯದಲ್ಲಿ ಚೇತರಿಸಿಕೊಂಡಿತ್ತು