ಭರ್ಜರಿ ಬಾಡೂಟ ಸವಿದು ಶಿವಧ್ಯಾನ

ರಾಮನಗರ ಜಿಲ್ಲೆಯ ಚನ್ನಪಟ್ಟಣದ ಮಂಗಾಡಹಳ್ಳಿ ಗ್ರಾಮದಲ್ಲಿಯೇ ಸಿದ್ದಪ್ಪಾಜಿ ಮಂದಿರವಿದೆ.

ಕುರಿ, ಕೋಳಿ ಸಾರು, ಗೊಜ್ಜು ಮಾಡಿ ನೈವೇದ್ಯ ಇಟ್ಟು ವಿಶೇಷ-ವಿಶಿಷ್ಟವಾಗಿ ಶಿವರಾತ್ರಿ ಹಬ್ಬವನ್ನ ಆಚರಣೆ ಮಾಡಲಾಗುತ್ತೆ.

ನೂರಾರು ವರ್ಷಗಳಿಂದ ಈ ಆಚರಣೆ ನಡೆದುಕೊಂಡು ಬಂದಿದೆ.

ಈ ಆಚರಣೆಯಿಂದ ನಮಗೆ ಶುಭವಾಗಿದೆ ಎನ್ನುತ್ತಾರೆ ಭಕ್ತರು.

ಈ ಆಚರಣೆಯನ್ನ ನಿಲ್ಲಿಸಿದರೆ ಸಮಸ್ಯೆ ಆಗಲಿದೆ. ಹಾಗಾಗಿ ಪ್ರತಿ ಶಿವರಾತ್ರಿಗೂ ಇದೇ ರೀತಿ ಆಚರಣೆ ಮಾಡ್ತೇವೆ ಅಂತಾರೆ ಭಕ್ತರು.

ಸಾವಿರಾರು ಜನ ಭಕ್ತರು ಬಾಡೂಟ ಸವಿಯುತ್ತಾರೆ.

ಚನ್ನಪಟ್ಟಣದ ಜೊತೆಗೆ ಹೊರರಾಜ್ಯದಿಂದಲೂ ಜನ ಬರ್ತಾರೆ ಎನ್ನುತ್ತಾರೆ" ಸಿದ್ದಪ್ಪಾಜಿ ದೇವರ ಅರ್ಚಕರು.

 ಶಿವರಾತ್ರಿ ಹಬ್ಬವನ್ನ ಈ ಗ್ರಾಮದಲ್ಲಿ ವಿಶಿಷ್ಟವಾಗಿ ಆಚರಣೆ ಮಾಡಲಾಗ್ತಿತ್ತು.

ಭಕ್ತರು ಸಹ ಬಾಡೂಟ ಸವಿದು ಶಿವಧ್ಯಾನ ಮಾಡಿದರು.