ಇದು ಒಂದೇ ಕಣ್ಣಿನ ನಾಗರಹಾವು

ನೀವು ನಾಗರಹಾವನ್ನು ನೋಡಿರ್ತೀರಿ, ಆದ್ರೆ ಈ ನಾಗರಹಾವನ್ನು ನೋಡಿರೋಕೆ ಸಾದ್ಯವೇ ಇಲ್ಲ!

ಹೌದು, ಅಂತಹ ವಿಶಿಷ್ಟ ನಾಗರಹಾವೊಂದು ಕಾರವಾರದಲ್ಲಿ ಪತ್ತೆಯಾಗಿದೆ

ಎಲ್ಲೂ ಕಾಣಿಸೋದೇ ಇಲ್ಲ ಎಂಬಷ್ಟು ವಿರಳವಾಗಿದ್ದ ಒಂದೇ ಕಣ್ಣಿನ ನಾಗರಹಾವೊಂದು ಪತ್ತೆಯಾಗಿದೆ

ಒಕ್ಕಣ್ಣಿನ ಅಥವಾ ಒಂದೇ ಕಣ್ಣನ್ನು ಹೊಂದಿರುವ ನಾಗರಹಾವು ಕಾರವಾರ ತಾಲೂಕಿನ ಕದ್ರಾದಲ್ಲಿ ಪತ್ತೆಯಾಗಿದೆ

ಸದ್ಯ ಈ ಒಂದೇ ಕಣ್ಣಿನ ನಾಗರಹಾವನ್ನು ಸುರಕ್ಷಿತವಾಗಿ ಕಾಡಿಗೆ ತಲುಪಿಸಲಾಗಿದೆ

ಸ್ಥಳೀಯರಿಗೆ ಪತ್ತೆಯಾದ ಈ ಒಕ್ಕಣ್ಣಿನ ನಾಗರಹಾವು ಸುಮಾರು 4.5 ಅಡಿಯ ಉದ್ದವಿದೆ

ಕದ್ರಾ ಅರಣ್ಯ ವಿಭಾಗದ ಅರಣ್ಯ ವೀಕ್ಷಕ ಬಿಲಾಲ್ ಶೇಖ್ ತಕ್ಷಣ ಸ್ಥಳಕ್ಕೆ ತೆರಳಿ ಹಾವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ

ಈ ನಾಗರ ಹಾವಿಗೆ ಒಂದು ಕಣ್ಣು ಇರಲಿಲ್ಲ

ಈ ಒಕ್ಕಣ್ಣಿನ ನಾಗಿಣಿ ಒಂದು ಕಣ್ಣಿನ ಸಂಪೂರ್ಣ ದೃಷ್ಟಿ ಕಳೆದುಕೊಂಡಿತ್ತು