Ayodhya ತಲುಪಿದ ಸಾಲಿಗ್ರಾಮ ಶಿಲೆ!

ರಾಮ ದೇವರ ಮೂರ್ತಿ ನಿರ್ಮಾಣಕ್ಕಾಗಿ ಬೇಕಾಗಿರುವ ಸಾಲಿಗ್ರಾಮ ಶಿಲೆ ಅಯೋಧ್ಯೆಯನ್ನು ತಲುಪಿದೆ

ಅಯೋಧ್ಯೆ ತಲುಪಿರುವ ಸಾಲಿಗ್ರಾಮ ಶಿಲೆಯನ್ನು ಸ್ವಾಗತಿಸಲು ಭಕ್ತರ ದಂಡೇ ಹರಿದುಬಂದಿದೆ

ನೇಪಾಳದ ಕಾಳಿ ಗಂಡಕಿ ಜಲಪಾತದಿಂದ ತರಲಾದ ಬಂಡೆಕಲ್ಲನ್ನು ಅಯೋಧ್ಯೆಯ ರಾಮ್ ಸೇವಕ್ ಪುರದಲ್ಲಿ ಇರಿಸಲಾಗಿದೆ

ರಾಮಮಂದಿರಕ್ಕಾಗಿ ತರಲಾದ ಸಾಲಿಗ್ರಾಮದ ಎರಡು ಬೃಹತ್ ಬಂಡೆಕಲ್ಲುಗಳು ಜನಕಪುರದಿಂದ ಅಯೋಧ್ಯೆ ತಲುಪಿವೆ

ಅಯೋಧ್ಯೆಯಲ್ಲಿ ವೈದಿಕ ಬ್ರಾಹ್ಮಣರ ಸಮ್ಮುಖದಲ್ಲಿ ಶಿಲೆಯ ಪೂಜೆಯನ್ನು ನಿಯಮಗಳ ಪ್ರಕಾರ ಮಾಡಲಾಗಿದೆ

ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಪ್ರಕಾರ ಸನಾತನ ಧರ್ಮದಲ್ಲಿ ಸಾಲಿಗ್ರಾಮ ಶಿಲೆ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ

ಸಾಮಾನ್ಯವಾಗಿ ಸಾಲಿಗ್ರಾಮ ಕಲ್ಲು ಪ್ರತಿಯೊಂದು ಮಠ ಮತ್ತು ದೇವಾಲಯಗಳಲ್ಲಿ ಕಂಡುಬರುತ್ತದೆ

ಸಾಲಿಗ್ರಾಮ ಕಲ್ಲುಗಳಲ್ಲಿ ಭಗವಾನ್ ವಿಷ್ಣುವು ನೆಲೆಸಿದ್ದಾನೆ ಎಂಬ ನಂಬಿಕೆಯಿದೆ

ಸಾಲಿಗ್ರಾಮ ಕಲ್ಲುಗಳು ನೇಪಾಳದ ಪವಿತ್ರ ಗಂಡಕಿ ನದಿಯಲ್ಲಿ ಕಂಡುಬರುತ್ತದೆ

ಸಾಲಿಗ್ರಾಮ ಕಲ್ಲುಗಳನ್ನು ಎಲ್ಲಿ ಇರಿಸಲಾಗುತ್ತದೆಯೋ ಅಲ್ಲಿ ಲಕ್ಷ್ಮಿ ದೇವಿ ವಾಸಿಸುತ್ತಾಳೆ ಎಂಬ ನಂಬಿಕೆಯಿದೆ