ಕೊಪ್ಪಳದ ಈ ಸಾಣಾಪುರ ಕೆರೆ ಫುಲ್ ಫೇಮಸ್
ತುಂಗಭದ್ರಾ ಜಲಾಶಯ ಭರ್ತಿಯಾಗಿ ನದಿಗೆ ನೀರು ಹರಿಸುವ ಸಂದರ್ಭದಲ್ಲಿ ಸಾಣಾಪುರ ಫಾಲ್ಸ್ ಹಾಗೂ ಕೆರೆ ಭರ್ತಿಯಾಗುತ್ತದೆ
ಇಲ್ಲಿನ ಕೆರೆ ಹಾಗೂ ಜಲಪಾತ ನೋಡುಗರ ಮನ ತಣಿಸುವಂತಿವೆ
ನಿತ್ಯ ನೂರಾರು ಜನರು ಕುಟುಂಬ ಸಮೇತರಾಗಿ ಇಲ್ಲಿಗೆ ಆಗಮಿಸುತ್ತಿದ್ದಾರೆ
ವಿವಿಧ ಭಾಗದಿಂದ ಈ ಕೆರೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ
ವಾರಾಂತ್ಯ ಬಂದರೆ ಸಾಕು ಈ ಕೆರೆಯು ಜನರಿಂದ ತುಂಬಿ ತುಳುಕುತ್ತದೆ
ಇಷ್ಟಲ್ಲದೇ ಅನೇಕ ಪ್ರಸಿದ್ಧ ಕನ್ನಡ ಮತ್ತು ತೆಲುಗು ಚಿತ್ರಗಳ ಚಿತ್ರಿಕರಣವನ್ನೂ ಸಾಣಾಪುರ ಕೆರೆಯ ವಾತಾವರಣದಲ್ಲಿ ಮಾಡಲಾಗಿದೆ
ದಿಗಂತ್ ಹಾಗೂ ಐಂದ್ರಿತಾ ರೈ ನಟನೆಯ ಕನ್ನಡ ಚಲನಚಿತ್ರ 'ಮನಸಾರೆ' ಸಿನೆಮಾ ಶೂಟಿಂಗ್ಗೆ ಸಾಣಾಪುರ ಕೆರೆ ಸ್ಥಳ ಒದಗಿಸಿದೆ
ಶಿವ ಬಾಲಾಜಿ ಕಾಜಲ್ ಅಗರ್ವಾಲ್ ನಟನೆಯ ತೆಲುಗಿನ ಚಂದಾಮಾಮ ಸಿನೆಮಾ, ನಿತಿನ್ ಹಾಗೂ ಚಾರ್ಮಿ ಕೌರ್ ನಟನೆಯ ತೆಲುಗಿನ ಶ್ರೀ ಆಂಜನೇಯಮ್ ಕೂಡಾ ಪಟ್ಟಿಯಲ್ಲಿದೆ
ಇತ್ತೀಚಿಗೆ ಪ್ರೀ ವೆಡ್ಡಿಂಗ್ ಶೂಟಿಂಗ್ ಸಹ ಅಧಿಕ ಸಂಖ್ಯೆಯಲ್ಲಿ ಚಿತ್ರಿಸಲಾಗುತ್ತಿದೆ