ಈ ಗಣಪನಿಗೆ ಉಪ್ಪೇ ನೈವೇದ್ಯ

ಒಂದು ಕಡೆ ಉಪ್ಪಿನ ಮೂಟೆ, ಇನ್ನೊಂದೆಡೆ ಭಕ್ತರ ಇಷ್ಟಾರ್ಥ ಈಡೇರಿಸುವ ಗಣಪ ಇರೋ ಈ ಕ್ಷೇತ್ರದ ಹೆಸರೇ ಶ್ರೀ ಉಪ್ಪಿನ ಗಣಪತಿ ದೇವಸ್ಥಾನ

ಉತ್ತರ ಕನ್ನಡದ ಕುಮಟಾ ತಾಲೂಕಿನಲ್ಲಿರೋ ಗಣಪನಿಗೆ ಉಪ್ಪಿನ ಹರಕೆ ಸಮರ್ಪಿತವಾಗುತ್ತದೆ

ಸಿಹಿಪ್ರಿಯ ಗಣಪನಿಗೆ ಹೀಗೆ ಉಪ್ಪು ಸಮರ್ಪಿಸೋದಕ್ಕೂ ಒಂದು ಇತಿಹಾಸವಿದೆ

ಈ ಹಿಂದೆ ಅಘನಾಶಿನಿ ತೀರದಲ್ಲಿದ್ದ ಗಣಪನಿಗೆ ಅಲ್ಲಿದ್ದೋರೆಲ್ಲ ಒಂದು ಹಿಡಿ ಉಪ್ಪನ್ನ ಕಾಣಿಕೆಯಾಗಿ ಅರ್ಪಿಸಿ ತಮ್ಮ ಕೆಲಸ ಆಗ್ಲಿ ಅಂತ ಬೇಡ್ಕೊತಿದ್ರು

ಅದು ಕ್ರಮೇಣ ಹರಕೆಯಾಗಿ ಮುಂದುವರೆಯಿತು

ನಂತರದ ದಿನಗಳಲ್ಲಿ ಮೂಲಸ್ಥಾನದಿಂದ ಪೇಟೆಗೆ ಬಂದರೂ ಗಜಾನನ ಈಗಲೂ ಉಪ್ಪಿಗೆ ಒಲಿಯುವ ದೇವರಾಗಿಯೇ ಇದ್ದಾನೆ

ಇಷ್ಟು ಮಾತ್ರವಲ್ಲ ಮದುವೆ, ನೌಕರಿ ಆಗಬೇಕಿದ್ದರೆ, ವ್ಯವಹಾರ ಕೈ ಹಿಡಿಯಲು, ಮೈಕೈ ನೋವು ಇದ್ರೆ ಉಪ್ಪಿನ ಗಣಪತಿಗೆ ಉಪ್ಪಿನ ಹರಕೆ ಮಾಡ್ಕೊಂಡ್ರೆ ಈಡೇರುತ್ತೆ ಅನ್ನೋ ನಂಬಿಕೆಯಿದೆ

200 ವರ್ಷಗಳ ಇತಿಹಾಸವಿರುವ ಗಣಪನದ್ದು ಎರಡುವರೆ ಅಡಿ ಎತ್ತರದ ಮೂರ್ತಿ ಇದೆ

ಪ್ರತಿ ಸಂಕಷ್ಟಿ, ಅಂಗಾರಕ ಸಂಕಷ್ಟಿ ಹಾಗೂ ಗಣೇಶ ಚತುರ್ಥಿ ಇಲ್ಲಿನ ವಿಶೇಷ