ಮೌನೇಶ್ವರ ಜಾತ್ರೆಯಲ್ಲಿ ಗಾಂಜಾ ನಶೆ!

ಗಾಂಜಾ ನಶೆಯಲ್ಲಿ ತೇಲಾಡ್ತಿರೋ ನೂರಾರು ಸಾಧುಗಳು,

ಸಂತರಿಗೆ ಗಾಂಜಾ ತಂದಕೊಡ್ತಾ ಸೇವೆ ಮಾಡ್ತಿರೋ ಭಕ್ತರು! 

ಈ ಜಾತ್ರೆಯಲ್ಲಿ ಗಾಂಜಾ ಸೇವನೆ ಮಾಡುವುದಕ್ಕೆ ಒಂದು ಸ್ಥಳವಿದೆ. ಅದೇ ಕೈಲಾಸ ಕಟ್ಟೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಗ್ರಾಮದ ಸುಪ್ರಸಿದ್ಧ ಮೌನೇಶ್ವರ ಜಾತ್ರೆಯ ವಿಶೇಷವೇ ಇದು!

ಈ ಬಾಬಾಗಳು ಗಾಂಜಾ ಸೇವನೆಯಲ್ಲಿ ಕೈಲಾಸ ಕಾಣುತ್ತಿದ್ದಾರೆ.

ಗಾಂಜಾ ಗಮ್ಮತ್ತಿನ ಮೌನೇಶ್ವರ ಜಾತ್ರೆಯು ಯಾದಗಿರಿಯಲ್ಲಿ ಐದು ದಿನಗಳ ಕಾಲ ಅದ್ದೂರಿಯಾಗಿ ನಡೆಯುತ್ತೆ.

ಮೌನೇಶ್ವರ ದೇವಸ್ಥಾನದ ಬಳಿ ಕುಳಿತು ಸಾಧುಗಳು ಗಾಂಜಾ ಸೇವನೆ ಮಾಡ್ತಾರೆ.

ಸ್ವತಃ ಪರಶಿವನೇ ಸಾಧುಗಳಿಗೆ ನೀವು ನನ್ನ ಕಾಣೋಕೆ ಕಾಶಿಗೆ ಹೋಗ್ಬೇಕಂತಿಲ್ಲ, ಯಾದಗಿರಿಯಲ್ಲೇ ನಿಮಗೆ ನಾನು ದರ್ಶನ ಕೊಡ್ತೇನೆ ಅಂದ್ನಂತೆ.

ಕರ್ನಾಟಕ ಒಂದೇ ಅಲ್ದೇ, ದೇಶದ ನಾನಾ ಕಡೆಯಿಂದ ದಶಕಗಳಿಂದ ನಡೆಯುತ್ತಿರೋ ಈ ಜಾತ್ರೆಗೆ ಸಾಧುಗಳು ಆಗಮಿಸಿದ್ರು.