Mysoreನಲ್ಲಿ ಗೆಡ್ಡೆ ಗೆಣಸು ಮೇಳ 2023
ಕೊಲಂಬಿಯಾದ ಯೋಕನ್ ಬೀನ್ಸ್, ಹಲವು ಬಗೆಯ ರುಚಿ, ವರ್ಣ, ಆಕಾರದ ವೈವಿಧ್ಯಮಯ ಗೆಡ್ಡೆ ಗೆಣಸು, ಗೆಣಸಿನಿಂದ ತಯಾರಿಸಿದ ಆಹಾರದ ಗಮಲನ್ನು ಸವಿಯಬಹುದು
ಎರಡು ದಿನಗಳ ಈ ಮೇಳದಲ್ಲಿ ರಾಜ್ಯದ ನಾನಾ ಭಾಗಗಳಿಂದ ಬಂದಿರುವ ರೈತರ ಗುಂಪುಗಳು ಬಗೆ ಬಗೆಯ ಗೆಡ್ಡೆ ಗೆಣಸುಗಳನ್ನು ಪ್ರದರ್ಶನಕ್ಕೆ ತಂದಿವೆ
ವಿವಿಧ ಪ್ರಭೇದಕ್ಕೆ ಸೇರಿರುವ, ವೈವಿಧ್ಯಮಯ ಗಾತ್ರ ಹಾಗೂ ಆಕಾರದ ಗೆಡ್ಡೆ ಗೆಣಸುಗಳು ಮೇಳದಲ್ಲಿ ಗಮನ ಸೆಳೆಯುತ್ತಿವೆ
ಕೇರಳದ ರೈತ ಶಾಜಿ ಪ್ರದರ್ಶನಕ್ಕೆ ತಂದಿರುವ 200 ಬಗೆಯ ಗೆಡ್ಡೆ ಗೆಣಸುಗಳು ಮತ್ತು ಕೊಲಂಬಿಯಾದ ಯೋಕನ್ ಬೀನ್ಸ್ ಮೇಳದ ಮುಖ್ಯ ಆಕರ್ಷಣೆಯಾಗಿವೆ
ಗೆಡ್ಡೆ ಗೆಣಸು ಬೆಳೆಯುವವರು ಸೇರಿದಂತೆ ಇನ್ನಿತರ ಸಾವಯವ ಕೃಷಿ ಕೈಗೊಳ್ಳುವವರ ರೈತ ಉತ್ಪದಕ ಸಂಘ ರಚಿಸಲು ಸಹಜ ಸಮೃದ್ಧಿ ಸಂಘಟನೆಯವರಿಗೆ ಸಲಹೆ ನೀಡಲಾಗಿದೆ
ಅದಕ್ಕೆ ಬೇಕಾದ ಎಲ್ಲಾ ಸಹಕಾರವನ್ನು ಜಿಲ್ಲಾಡಳಿತ ಮಾಡಲಿದೆ
ಅಲ್ಲದೇ ನಬಾರ್ಡ್‌ನಲ್ಲಿಯೂ ನಾನಾ ಯೋಜನೆಗಳಿವೆ
ತೆರೆದ ಸಂತೆಗಳನ್ನು ಆರಂಭಿಸಿ ಸಾವಯವ ಆಹಾರ ಪದಾರ್ಥಗಳ ಮಾರಾಟಕ್ಕೆ ಅವಕಾಶ ನೀಡಲು 20 ಲಕ್ಷ ರೂಪಾಯಿ ಅನುದಾನವಿದೆ
ನಂತರ ಮೇಳದ ಆಯೋಜಕರಾದ ಸಹಜ ಸಮೃದ್ಧದ ಜಿ.ಕೃಷ್ಣ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು