Red Ant ಚಟ್ನಿ ರೆಸಿಪಿ ಇದು
ಸವಳಿ ಚಟ್ನಿ ಅಂದ್ರೆ ಸಿದ್ಧಿ ಜನಾಂಗದ ಸಖತ್ ಟೇಸ್ಟಿ, ಭೋಜನಕ್ಕೆ ಬಳಸೋ ಕೆಂಪು ಇರುವೆ ಚಟ್ನಿ
ಇದ್ಯಾವುದು ಆಫ್ರಿಕಾ ಖಂಡದ ಅಡುಗೆನಾ ಅಂತಾ ಕೇಳ್ಬೇಡಿ
ಯಾಕಂದ್ರೆ ಸಿದ್ಧಿ ಜನಾಂಗದ ಮೂಲವೂ ದಕ್ಷಿಣ ಆಫ್ರಿಕಾವೇ ಆಗಿದೆ
ಇನ್ನು ಈ ಸವಳಿ ಚಟ್ನಿ ಮಾಡಬೇಕೆಂದರೆ ಮರ ಹತ್ಬೇಕು, ಅಲ್ಲಿರೋ ಕೆಂಪಿರುವೆ ಗೂಡನ್ನ ತೆಗೆದು ನಂತರ ಇರುವೆ, ಮೊಟ್ಟೆ,ಮರಿಗಳಿಗೆ ಉಪ್ಪು ಹಾಕಬೇಕು
ಅವು ಸತ್ತ ನಂತರ ಅವುಗಳನ್ನು ಬಾಣಲೆಯಲ್ಲಿ ಹುರಿದು, ನಂತರ ಶುಂಠಿ, ರಾಮಪತ್ರೆ, ಕರಿಬೇವು, ಸಾಸಿವೆ, ಜೀರಿಗೆ, ಅರಿಶಿನ ಎಲ್ಲವನ್ನೂ ಸೇರಿಸಿ ಮಸಾಲೆ ಮಾಡಿಕೊಳ್ಳಬೇಕು
ನಂತರ ಮಿಕ್ಸಿಗೆ ಹಾಕಿ ಅಥವಾ ಗುಂಡುಕಲ್ಲಲ್ಲಿ ರುಬ್ಬಿದ್ರೆ ರುಚಿಕರ ಸವಳಿ ಚಟ್ನಿ ರೆಡಿಯಾಗುತ್ತೆ
ಇನ್ನೊಂದು ಕಡೆ ಇದಕ್ಕೆ ನೆಚ್ಚಿಕೊಳ್ಳೋಕೆ ಕಾಡುಗೆಣಸು ಬೇಯಿಸಿಕೊಂಡು ತಿನ್ನಬೇಕು
ಈ ಸವಳಿ ಚಟ್ನಿ ಆರೋಗ್ಯಕ್ಕೆ ಉತ್ತಮ ಅನ್ನೋದನ್ನ ಸಿದ್ಧಿ ಜನಾಂಗದ ಮಂದಿ ಕಂಡುಕೊಂಡಿದ್ದಾರೆ
ಹಾಗಾಗಿ ತಮ್ಮ ಊಟದ ಪ್ರಮುಖ ಆಹಾರವಾಗಿ ಇದನ್ನ ಇರಿಸಿಕೊಳ್ಳುತ್ತಾರೆ