ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಇಟಗಿ ಗ್ರಾಮದಲ್ಲಿ ಇರುವ ಈ ರಾಮೇಶ್ವರ ಮಾತನಾಡುವ ರಾಮೇಶ್ವರನೆಂದೇ ಪ್ರತೀತಿಯಿದೆ.
ಭಕ್ತರ ಪ್ರತಿ ಮಾತನ್ನೂ ಆಲಿಸುವ ಪುಷ್ಪ ಪ್ರಸಾದ ಕೊಡುವ ತ್ರಿಕಾಲ ಬಲಿ ಸ್ವೀಕರಿಸುವ ಗಣ ಗಳನ್ನುಳ್ಳ ತಾಂತ್ರಿಕ ವಿಧಿಗಳ ಆಕರವಾಗಿದ್ದ ರಾಮೇಶ್ವರ ದೇವಾಲಯವಿದು.
ಇಟಗಿ ಒಂದು ಪುಟ್ಟ ಗ್ರಾಮ ಇಷ್ಟಿಕಾಪುರ ಇದರ ಮೂಲ ಹೆಸರು ಇಷ್ಟಿಕಾ ಎಂದರೆ ಇಟ್ಟಿಗೆ ಯಾಗಗಳಿಗೆ ಹಾಗೂ ತಾಂತ್ರಿಕ ಕ್ರಿಯೆಗಳಿಗೆ ಪ್ರಸಿದ್ಧವಾದ ಈ ಕ್ಷೇತ್ರ ಬೀಳಗಿ ಅರಸರ ರಾಜಧಾನಿಯಾಗಿತ್ತು.
ಈ ಊರಲ್ಲಿ ರಾಮನು ಪ್ರತಿಷ್ಠಾಪಿಸಿದ ಎಂದು ಹೇಳಲ್ಪಡುವ ಪುರಾತನ ಶಿವಲಿಂಗವಿದ್ದು ಕದಂಬರು,ವಿಜಯನಗರ ಅರಸರು, ಬೀಳಗಿ ಅರಸರು ಮೂರು ಅರಸರ ಕಾಲದಲ್ಲಿ ದೇವಸ್ಥಾನ ಬೆಳೆಸಲ್ಪಟ್ಟಿದೆ.
ದೇವಾಲಯದ ಸುತ್ತಲೂ ಲಜ್ಜಾಗೌರಿ, ಮಿಥುನ ಶಿಲ್ಪಗಳು ಇರುವುದು ವಿಶೇಷ
ಸಾವಿರ ವರ್ಷ ಹಳೆಯದಾದ ದೇವಸ್ಥಾನವನ್ನು ಹಾಗೆ ಕಾಪಾಡಿಕೊಳ್ಳಲಾಗಿದೆ.
ರಾಮೇಶ್ವರ ಭಕ್ತರ ಜೊತೆ ಮಾತಾಡುತ್ತಾನೆ ಎಂಬ ಪ್ರತೀತಿ ಇದೆ.
ಯಾರಾದರೂ ಏನಾದರೂ ಬೇಡಿಕೊಂಡಾಗ ಹೂ ಬೀಳೀಸುವ ಮೂಲಕ ಮಾರ್ಗ ತೋರಿಸಿಕೊಡುವುದು ಅದಕ್ಕೆ ಸಾಕ್ಷಿ ಅಲ್ಲದೇ ಶಿವಗಣಗಳಿಗೆ ನಿತ್ಯ ತ್ರಿಕಾಲ ಬಲಿ ನಡೆಯುತ್ತದೆ.
ಹೊರಗಡೆ ನಾಗನ ಜೊತೆ ಎತ್ತರದ ಏಕನಾಗ ಶಿಲ್ಪ ಒಂದು ವಿಶಿಷ್ಟ; ಹೀಗೆ ಹಲವು ವೈಶಿಷ್ಟ್ಯದ ದೇಗುಲವಾದ ಈ ಕ್ಷೇತ್ರದಲ್ಲಿ ಭಯಭಕ್ತಿಯಿಂದ ಜನ ನಡೆದುಕೊಳ್ಳುತ್ತಾರೆ.