Raja Seatನಲ್ಲಿ ಹೂಗಳ ಸ್ವರ್ಗವೇ ಸೃಷ್ಟಿ!

ಮಡಿಕೇರಿಯ ರಾಜಾಸೀಟಿನಲ್ಲಿ ವಾರ್ಷಿಕ ಫಲಪುಷ್ಪ ಪ್ರದರ್ಶನ

ಮಂಜಿನ ನಗರಿಯ ರಾಜಾಸೀಟಿನಲ್ಲಿ ಹೂವಿನ ಲೋಕ ಅನಾವರಣ

ಮಡಿಕೇರಿಯಲ್ಲಿ ಕಣ್ಮನ ಸೆಳೆಯುತ್ತಿದೆ ಫಲಪುಷ್ಪ ಪ್ರದರ್ಶನ

38 ಅಡಿ ಉದ್ದ, 32 ಅಡಿ ಎತ್ತರದ ಅರಮನೆ ಪುಷ್ಪಗಳಿಂದ ಮೈದುಂಬಿದೆ

ಗುಲಾಬಿ, ಮಿರಾಬೆಲ್ ರೋಸ್, ಕೈತಂತಿಮಮ್, ಸೇವಂತಿಗೆ ಹೂಗಳನ್ನು ಫಲಪುಷ್ಪ ಪ್ರದರ್ಶನದಲ್ಲಿ ಕಾಣಬಹುದು

ಹೂಗಳಲ್ಲೇ ರೂಪತಳೆದ ಬಟರ್ ಫ್ಲೈ, ಟ್ರೋಫಿ, ಕರ್ನಾಟಕದ ಭೂಪಟ, ಕಾಫಿ ಕಪ್, ಮಿಕ್ಕಿ ಮೌಸ್ ಹಾಗೂ ಮತ್ತಿತರ ಗೊಂಬೆಗಳು

ಇನ್ನೊಂದೆಡೆ ತರಕಾರಿ ಕೆತ್ತನೆ, ಜೋಡಣೆ, ಇಕೆಬಾನ, ಬೋನ್ಸಾಯ್ಗಳ ಪ್ರದರ್ಶನವೂ ಗಮನ ಸೆಳೆಯುತ್ತಿದೆ

ಒಂದೆಡೆ ರಾಜಾಸೀಟಿನಲ್ಲಿ ಫಲಪುಷ್ಪ ಪ್ರದರ್ಶನ, ಮತ್ತೊಂದೆಡೆ ಪಕ್ಕದ ಗಾಂಧಿ ಮೈದಾನದಲ್ಲಿ ವೈನ್ ಮೇಳ 

ಬಗೆಬಗೆಯ ವೈನ್ಗಳು, ಹೂವಿನ ಗಿಡ, ಬೀಜ, ಕಸಿ ಗಿಡಗಳು ಸೇರಿದಂತೆ ಪ್ರದರ್ಶನ ಮತ್ತು ಮಾರಾಟದ ಮಳಿಗೆಗಳು ಕೈಬೀಸಿ ಕರೆಯುತ್ತಿವೆ

ಫಲಪುಷ್ಪಗಳ ಕಲಾಕೃತಿಯಲ್ಲಿ ಮತಯಂತ್ರ ಸೇರಿದಂತೆ ವಿವಿಧ ಕಲಾಕೃತಿ ರಚನೆ ಮಾಡಲಾಗಿದೆ