ಪುನೀತ್ ರಾಜ್​ಕುಮಾರ್ ಅಭಿಮಾನಿಗಳ ಮನೆ ದೇವರು ಅನ್ನೋದು ಮತ್ತೆ ಸಾಬೀತಾಗ್ತಿದೆ.

ಅಭಿಮಾನಿಗಳು ಇದೀಗ ಅಪ್ಪುವನ್ನು ಸಾಕ್ಷಾತ್ ದೇವರನ್ನೇ ಆಗಿ ಭಾವಿಸುತ್ತಿದ್ದಾರೆ.

ವಿಜಯನಗರದ ಅಪ್ಪು ಅಭಿಮಾನಿಗಳು ಅಪ್ಪುಅವರ ದೇವರ ಮಾಲೆ ವೃತಕ್ಕೆ ಸಜ್ಜಾಗಿದ್ದಾರೆ.

ದೊಡ್ಮನೆ ಹುಡ್ಗನ ಅಭಿಮಾನಿಗಳಿಂದ ಮಾಲಾಧಾರಣೆ ವ್ರತ ಆರಂಭವಾಗಿದೆ.

ವಿಜಯನಗರದ ಹೊಸಪೇಟೆ ನಗರದ ಅಪ್ಪು ಪುತ್ಥಳಿ ಬಳಿ ಅಭಿಮಾನಿಗಳು ಮಾಲೆ ಧರಿಸಲಿದ್ದಾರೆ.

ಮಾಲೆ ಹಾಕುವ ಎಲ್ಲಾ ಅಭಿಮಾನಿಗಳು 5 ದಿನ, 11 ದಿನ ಅಥವಾ 1 ದಿನ ಮಾಲೆ ಹಾಕಬಹುದಾಗಿದೆ.

ಅಪ್ಪು ದೇವರ ಫೋಟೋವನ್ನು ಇಟ್ಟಿ ಪೂಜೆ ಮಾಡುವ ವ್ರತ ಪಾಲಿಸಬೇಕಿದೆ.

ಅಪ್ಪು ದೇವರ ಡಾಲರ್ ಇರುವ ಮಾಲೆ, ಕೇಸರಿ ಶಾಲು, ಕೇಸರಿ ಪಂಚೆ, ಕೇಸರಿ ಶರ್ಟ್ ತೊಟ್ಟು ಮಾಲೆ ಧರಿಸಲಿದ್ದಾರೆ.

ಈ ಮಾಲೆ ಹಾಕುವವರೆಲ್ಲರೂ ಯಾವ ಕೆಟ್ಟ ಚಟಗಳಿಗೆ ಹೋಗಬಾರದು.

ಅಪ್ಪು ಪುಣ್ಯಭೂಮಿ ದರ್ಶನದ ಬಳಿಕವಷ್ಟೇ ಹಂಪಿಯಲ್ಲಿ ಅಭಿಮಾನಿಗಳು ಮಾಲೆ ವಿಸರ್ಜನೆ ಮಾಡಬಹುದಾಗಿದೆ.