ಹಸಿದವರಿಗೆ ಅನ್ನ ಹಾಕುತ್ತಿರುವ ಮಂಗಳಮುಖಿಯರು

ಈ ಮಂಗಳಮುಖಿಯರ ವಿಶೇಷ ಕ್ಯಾಂಟೀನ್ಗೆ ಬೇಕು ಜನ ಬೆಂಬಲ.

ಉಡುಪಿಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಇವರು ಇಂದು ಸ್ವಂತ ಕ್ಯಾಂಟೀನ್ ಆರಂಭಿಸಿದ್ದಾರೆ.

ಬದಲಾವಣೆಯ ದಾರಿ ಹಿಡಿದ ಮಂಗಳಮುಖಿಯರ ಹೆಸರು ಪೂರ್ವಿ, ಡಿಂಪಲ್, ವೈಷ್ಣವಿ ಮತ್ತು ಚಂದನ ಅಂತ. 

ಉಡುಪಿಯ Bus Stand ಪಕ್ಕ ರಾತ್ರಿ 1 ಘಂಟೆಯಿಂದ ಮುಂಜಾನೆ 7ರ ತನಕ ಇವ್ರ ಕ್ಯಾಂಟೀನ್ ತೆರೆದಿರುತ್ತೆ.

ಈ ಮಂಗಳಮುಖಿಯರ ಪುಟ್ಟ ಕ್ಯಾಂಟೀನ್ ಪ್ರಯಾಣಿಕರ ಹಸಿವು ನೀಗಿಸುವ ಆಶ್ರಯತಾಣವಾಗಿದೆ.

ಈ ಮಂಗಳಮುಖಿಯರ ಕ್ಯಾಂಟೀನ್ಗೆ ಉತ್ತಮ ರೆಸ್ಪಾನ್ಸ್ ಸಹ ಸಿಗುತ್ತಿದೆ.

ಉಡುಪಿಯಲ್ಲಿ ಓಪನ್ ಆದ ಈ ಚಿಕ್ಕ ಕ್ಯಾಂಟೀನ್ ಕ್ರಾಂತಿಯ ಗಾಳಿಯನ್ನೇ ಬೀಸಿದೆ.

ಈ ಮಂಗಳಮುಖಿಯರು ಅನೇಕ ಮಂಗಳಮುಖಿಯರಿಗೆ ಸ್ಪೂರ್ತಿಯಾಗಿದ್ದಾರೆ.

ನೀವೂ ಉಡುಪಿಗೆ ಹೋದಾಗ ಇವರ ಕ್ಯಾಂಟೀನ್ ತಿಂಡಿ ತಿನಿಸು ತಿಂದು ಚಹಾ ಹೀರೋಕೆ ಮರೆಯಬೇಡಿ!