ರಾಜ್ಯದಲ್ಲಿ Sankranti ಶಾಪಿಂಗ್ ಬಲುಜೋರು!

ರಾಜ್ಯದಲ್ಲಿ ವರ್ಷದ ಮೊದಲ ಹಬ್ಬ ಸಂಕ್ರಾಂತಿಯ ಸಂಭ್ರಮ ಶುರುವಾಗಿದೆ

ಜನರು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಸಖತ್ ಶಾಪಿಂಗ್ ಮಾಡುತ್ತಿದ್ದಾರೆ

ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಸಂಕ್ರಾಂತಿ ಹಬ್ಬ ಕಳೆಗುಂದಿತ್ತು

ಬಾರಿ ಸಂಕ್ರಾಂತಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಜನ ಮುಂದಾಗಿದ್ದಾರೆ

ಪ್ರಮುಖವಾಗಿ ಜನರು ಎಳ್ಳು, ಬೆಲ್ಲ ಖರೀದಿ ಮಾಡುತ್ತಿದ್ದಾರೆ

ಹೂ, ಹಣ್ಣು, ಕಬ್ಬು, ಗೆಣಸು, ಕಡಲೆಕಾಯಿ, ತರಕಾರಿಗಳ ಖರೀದಿಯಲ್ಲಿ ಜನ ಬ್ಯುಸಿಯಾಗಿದ್ದಾರೆ

ಬೆಂಗಳೂರಿನ ಕೆ. ಆರ್. ಮಾರುಕಟ್ಟೆಯಲ್ಲಿ ವ್ಯಾಪಾರ-ವಹಿವಾಟು ಜೋರಾಗಿದೆ

ಎಳ್ಳು-ಬೆಲ್ಲದ ಜೊತೆಗೆ ಕಬ್ಬು, ಕಡಲೆಕಾಯಿಯನ್ನು ಜನರು ಖರೀದಿಸುತ್ತಿದ್ದಾರೆ

ಜಿಲ್ಲೆಗಳಲ್ಲೂ ಜನರು ಸಂಕ್ರಾಂತಿ ಶಾಪಿಂಗ್ ಜೋರಾಗಿ ಮಾಡುತ್ತಿದ್ದಾರೆ