ಗಲ್ಲಾಪೆಟ್ಟಿಗೆ ಮೇಲೆ ಕುಳಿತು ಹೋಟೆಲ್ ನಡೆಸುತ್ತೆ ಗಿಳಿ!

ಚಹಾ, ತಿಂಡಿ ತಿನ್ನೋಕೆ ಬರೋರಿಗೆ ಗಿಳಿಯೇ ಮನರಂಜನೆ ಕೇಂದ್ರಬಿಂದು!

ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಸಂಶಿಯ ಬಸ್ ನಿಲ್ದಾಣದ ಎದುರಿನ ಹೋಟೆಲ್​​ನಲ್ಲಿ ಮಾತನಾಡೊ ಗಿಳಿಯಿದೆ.

ಗಿಳಿಯನ್ನು ಮಾತಾಡಿಸೋ ಗ್ರಾಹಕರು, ಅದರ ಕೈಗೇ ಹಣಕೊಟ್ಟು ಹೋಗುತ್ತಾರೆ. 

ಈ ಹೋಟೆಲ್​ಗೆ ಬಂದವರಿಗೆಲ್ಲಾ ಭರಪೂರ ಮನರಂಜನೆ ಸಿಗುತ್ತಿದೆ.

ಈ ಗಿಳಿ ತಾನೂ ಚಹಾದ ರುಚಿ ನೋಡಿ ಖುಷಿಪಡುತ್ತೆ. 

ಈ ಗಿಳಿ ಕ್ಯಾಷಿಯರ್ ಮತ್ತು ಹೋಟೆಲ್ ಮಾಲೀಕನಂತೆಯೇ ಆಗಿದೆ

ಎಲ್ಲರಿಗೂ ಈ ಗಿಳಿಯ ಮೇಲೇ ಕಣ್ಣು!

ಸಂಶಿಯಲ್ಲಿರುವ ಈ ಪುಟ್ಟ ಹೋಟೆಲ್ ಗಿಳಿಯಿಂದ ಸದಾ ಜನನಿಬಿಡವಾಗಿರುತ್ತೆ!

ನೋಡಿ, ಒಂದು ಗಿಳಿಯಿಂದಲೂ ಫೇಮಸ್ ಆಗಬಹುದು ಅಲ್ವಾ!?