ಬರೋಬ್ಬರಿ 14 ಲಕ್ಷ ರೂಪಾಯಿಗೆ ಮಾರಾಟವಾಗಿ ದಾಖಲೆ ನಿರ್ಮಿಸಿದ ಎತ್ತು

ಎರಡೂವರೆ ವರ್ಷದ ಹಿಂದೆ 5 ಲಕ್ಷ ರೂಪಾಯಿಗೆ ಖರೀದಿ ಮಾಡಿದ್ದ ಎತ್ತು, ಈಗ ಬರೋಬ್ಬರಿ 14 ಲಕ್ಷ ರೂಪಾಯಿಗೆ ಮಾರಾಟವಾಗಿದೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಕಿ ಗ್ರಾಮದ ಎತ್ತು ದಾಖಲೆ ಬೆಲೆಗೆ ಮಾರಾಟವಾಗಿದೆ.

ರಬಕವಿ ಬನಹಟ್ಟಿ ತಾಲೂಕಿನ ನಂದಗಾಂವ ಗ್ರಾಮದ ವಿಠ್ಠಲ ಮ್ಯಾಗಾಡಿ ಎಂಬ ರೈತ 14 ಲಕ್ಷ ರೂಪಾಯಿಗೆ ಎತ್ತನ್ನು ಖರೀದಿ ಮಾಡಿದ್ದಾರೆ.

ಕಳೆದ ಎರಡೂವರೆ ವರ್ಷದ ಹಿಂದೆ ಗಡದಾರ ಕುಟುಂಬ ಈ ಎತ್ತನ್ನು 5 ಲಕ್ಷ ರೂಪಾಯಿಗೆ ಖರೀದಿ ಮಾಡಿತ್ತು. 

ಈ ಎತ್ತು ಬರೋಬ್ಬರಿ 50ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಜಯಗಳಿಸಿದೆ.

ಎತ್ತು ಜಯಿಸಿದ ಬಹುಮಾನಗಳಲ್ಲಿ 6 ಬೈಕ್, 5 ತೊಲೆ ಬಂಗಾರ, 12 ಲಕ್ಷ ರೂಪಾಯಿ ನಗದು ಸೇರಿದೆ.

ಕುಟುಂಬದ ಓರ್ವ ಸದಸ್ಯನಂತೆ ಎತ್ತನ್ನು ಸಾಕಿದ್ದ ಗಡದಾರ ಕುಟುಂಬ,

ಇಂದು ಮಾರಾಟವಾದ ಎತ್ತಿಗೆ ಆರತಿ ಎತ್ತಿ, ಗುಲಾಲ್ ಎರಚಿ ಬೀಳ್ಕೊಟ್ಟಿದ್ದಾರೆ.

ದಾಖಲೆ ಬೆಲೆಗೆ ಮಾರಾಟವಾದ ಎತ್ತನ್ನು ಬಿಳ್ಕೋಟ್ಟ ಹಲಕಿ ಗ್ರಾಮಸ್ಥರು