ಧಾರವಾಡದ ಸೀರೆಯುಟ್ಟು Budget ಮಂಡಿಸಿದ ಸಚಿವೆ!

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ 5ನೇ ಬಜೆಟ್ ಮಂಡಿಸಿದ್ದಾರೆ

ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡನೆ ವೇಳೆ ಕರ್ನಾಟಕದ ಸೀರೆ ಉಟ್ಟಿದ್ದು ವಿಶೇಷ

ನಿರ್ಮಲಾ ಸೀತಾರಾಮನ್ ಧಾರವಾಡ ಜಿಲ್ಲೆಯ ನವಲಗುಂದದ ಕಸೂತಿ ಕಲೆಯಿರುವ ಸೀರೆಯುಟ್ಟು ಬಜೆಟ್ ಮಂಡಿಸಿದ್ದಾರೆ

ನಿರ್ಮಲಾ ಸೀತಾರಾಮನ್ಉಟ್ಟಿದ್ದ ಸೀರೆಯನ್ನು ರೆಡಿ ಮಾಡಿದ್ದುಆರತಿ ಹಿರೇಮಠ ಮಾಲೀಕತ್ವದ ಆರತಿ ಕ್ರಾಪ್ಟ್ಸ್​​ ಮಹಿಳೆಯರು

ನಿರ್ಮಲಾ ಸೀತಾರಾಮನ್ ಧರಿಸಿದ್ದ ಕೆಂಪು (ಮರೂನ್) ಬಣ್ಣದ ಸೀರೆಯಲ್ಲಿ ನವಲಗುಂದದ ಕಸೂತಿ ಮಾಡಲಾಗಿದೆ

ಕೈಮಗ್ಗದಲ್ಲಿ ನೇಯ್ದ ಇಳಕಲ್ಲಿನ ರೇಷ್ಮೆ ಸೀರೆಗೆ ನವಲಗುಂದ ಕಸೂತಿ  ಮಾಡಲಾಗಿದೆ

ಪ್ರಲ್ಹಾದ ಜೋಶಿ ತಮ್ಮ ಸಹೋದ್ಯೋಗಿ ನಿರ್ಮಲಾ ಸೀತಾರಾಮನ್ ಅವರಿಗೆ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದರು

ಡಿಸೆಂಬರ್ ತಿಂಗಳಿನಲ್ಲಿ ಏಳು ಬಣ್ಣದ ಸೀರೆಗಳನ್ನು ನಿರ್ಮಲಾ ಸೀತಾರಾಮನ್ ಅವರಿಗೆ ರವಾನೆ ಮಾಡಲಾಗಿತ್ತು

ಏಳು ಸೀರೆಗಳಲ್ಲಿ ನಿರ್ಮಲಾ ಸೀತಾರಾಮನ್ 2 ಸೀರೆಗಳನ್ನು ಆರಿಸಿಕೊಂಡಿದ್ದರು

ಸೀರೆಗಳನ್ನು ಆಯ್ಕೆ ಮಾಡಿದ ಬಳಿಕ ಧಾರವಾಡದ ಆರತಿ ಕ್ರಾಫ್ಟ್ನಲ್ಲಿ ಸೀರೆಗೆ ಕಸೂತಿ ಮಾಡಲಾಗಿತ್ತು

ನಿರ್ಮಲಾ ಸೀತಾರಾಮನ್ ಮರೂನ್ ಮತ್ತು ನೀಲಿ ಬಣ್ಣದ ಸೀರೆ ಆಯ್ಕೆ ಮಾಡಿಕೊಂಡಿದ್ದರು