BR Hillನಲ್ಲಿ ಬಹುವರ್ಣದ ಕಣಜ ಪತ್ತೆ!

ಬಿಳಿಗಿರಿರಂಗನ ಬೆಟ್ಟದ ಅರಣ್ಯದಲ್ಲಿ ಬಹುವರ್ಣದ ಕಣಜ ಪತ್ತೆಯಾಗಿದೆ

ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾದ ಹೊಸಬಗೆಯ ಕೀಟ ಇದಾಗಿದೆ

ಕಣಜಕ್ಕೆ  “ಸೋಲಿಗ ಎಕಾರಿನಾಟಎಂದು ನಾಮಕರಣ ಮಾಡಲಾಗಿದೆ

ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಎಕಾಲಜಿ & ಎನ್ವಿರಾನ್ಮೆಂಟ್ ಕೀಟಶಾಸ್ತ್ರಜ್ಞರ ತಂಡ ಕಣಜವನ್ನು ಪತ್ತೆಮಾಡಿದೆ

ಹೊಸ ಜಾತಿಯ ಕಣಜವು ಮೆಟೋಪಿನೆ ಉಪ ಕುಟುಂಬದ 2ನೇ ಕಣಜವಾಗಿದೆ

ಸಂಶೋಧನಾ  ವರದಿಯನ್ನು ಯುರೋಪಿಯನ್ ಜರ್ನಲ್ ಆಫ್ ಟ್ಯಾಕ್ಸಾನಮಿಯಲ್ಲಿ ಪ್ರಕಟಿಸಲಾಗಿದೆ

ಮೆಟೋಪಿನೆ ಉಪ ಕುಟುಂಬವು 27 ಜೆನೆರಾಗಳನ್ನು(ಕುಲ) ಮತ್ತು 862  ಜಾತಿಯ ಕಣಜಗಳನ್ನೊಳಗೊಂಡಿದೆ

ಇವುಗಳಲ್ಲಿ ಹೆಚ್ಚಿನ ಜಾತಿಯ ಕಣಜಗಳು ಪ್ಯಾಲೆಯಾರ್ಕ್ಟಿಕ್, ನಿಯೋಟ್ರೋಪಿಕ್ಲ ಮತ್ತು ನಾರ್ಕ್ಟಿಕ್ ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತವೆ

ಈಗಾಗಲೇ ಬಿ.ಆರ್.ಟಿ ಅಭಯಾರಣ್ಯದಲ್ಲಿ 120 ಜಾತಿಯ ಇರುವೆ, 120 ಜಾತಿಯ ಚಿಟ್ಟೆ, 105 ಜಾತಿಯ ಜೀರುಂಡೆಗಳು ಪತ್ತೆಯಾಗಿವೆ