ತೇರನೇರಿ ಬಂದ ದ್ಯಾಮವ್ವ!

ಮುಂಡಗೋಡಿನ ಮಾರಿಕಾಂಬಾ ಜಾತ್ರೆಯ ವೈಭವವಿದು

3 ವರ್ಷಕ್ಕೊಮ್ಮೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಹಳೂರಿನ ಮಾರಿಕಾಂಬಾ ಜಾತ್ರೆಯ ವಿಶೇಷ!

ಉಧೋ, ಉಧೋ ಎನ್ನುವ ಉದ್ಘೋಷ. ತೇರ ಮಂಟಪದಲ್ಲಿ ಸಾಗಿ ಬರುತ್ತಿರುವ ತಾಯಿ ಮಾರಿಕಾಂಬೆ.

ಹಳೂರಿನ ಮಾರಿಕಾಂಬಾ ದೇವಿ ಜಾತ್ರೆ ಜಿಲ್ಲೆಯ ದೊಡ್ಡ ಜಾತ್ರೆಗಳಲ್ಲಿ ಒಂದಾಗಿದೆ. 

2006 ರಿಂದ ಶುರುವಾಗಿ ಈ ವರ್ಷ 6ನೇ ಬಾರಿ ಜಾತ್ರೆ ನಡೆಯುತ್ತಿದೆ. 

ಕೊರೋನಾ ಸೋಂಕಿನಿಂದ ಈ ಜಾತ್ರೆ ನಡೆದಿರಲಿಲ್ಲ

ಮುಂಡಗೋಡ, ಶಿರಸಿ, ಯಲ್ಲಾಪುರ ಈ ಮೂರು ಸೀಮೆಗಳ ನಾಲ್ಕು ಗ್ರಾಮದೇವಿಯರು ಸಹೋದರಿಯರು.

ಮಾರಿಕಾಂಬೆಯು ಎಲ್ಲಾ ಗಡಿ ಮೀರಿದ ಅಧಿದೇವತೆ ಅನ್ನೋ ನಂಬಿಕೆಯಿದೆ. 

ಒಟ್ಟಾರೆ ಈ ಜಾತ್ರೆ ವೈಭವೋಪೇತವಾಗಿ ನಡೆಯಿತು

ಭಕ್ತರು ದೇವಿಯ ದರ್ಶನ ಮಾಡಿ ಕಣ್ತುಂಬಿಕೊಂಡರು.