ಶಿರಸಿಯ ಚೆಂದುಳ್ಳಿ ಚೆಲುವೆಯರ ಕ್ಯಾಟ್ ವಾಕ್!
ಉತ್ತರ ಕನ್ನಡದ ಶಿರಸಿಯಲ್ಲಿ ನಡೆದ ‘ಮಿಸ್ ಶಿರಸಿ‘ ಫ್ಯಾಶನ್ ಶೋ ಸ್ಪರ್ಧೆಯು ನೋಡುಗರ ಕಣ್ಮನ ಸೆಳೆಯಿತು.
ಮಿಸ್ ಶಿರಸಿ ಆದ ಸುಂದರಿ ಇವ್ರೇ ನೇಹಾ ಶೆಟ್ಟಿ.
ಚೆಲುವೆಯರ ಕ್ಯಾಟ್ ವಾಕ್ ಅಂತೂ ಕಣ್ಕುಕ್ಕುವಂತಿತ್ತು.
ಸಾಂಪ್ರದಾಯಿಕ ಸಾರಿಯಿಂದ ಹಿಡಿದು ಮಾಡರ್ನು ಡ್ರೆಸ್ ಗಳ ಮೂಲಕವೂ ಚೆಲುವೆಯರು ಮಿಂಚಿದರು.
ರಾತ್ರಿಯ ತುಂಬು ಬೆಳದಿಂಗಳನ್ನ ಕನ್ಫ್ಯೂಶನ್ ಮಾಡುವ ಹಾಗೆ ಚಂದಿರನ ತಂಗಿಯರು ಹೆಜ್ಜೆ ಹಾಕಿದರು
ಮಿಸ್ ಶಿರಸಿ ಫ್ಯಾಶನ್ ಶೋ ಸ್ಪರ್ಧೆಯು ನೋಡುಗರ ಕಣ್ಕುಕ್ಕುವಂತೆ ನಡೆಯಿತು.
ವೆಸ್ಟರ್ನು, ಮಾಡರ್ನು, ಟ್ರೆಡಿಶನ್ನು ಬಗೆ ಬಗೆಯ ಡ್ರೆಸ್ ಗಳಲ್ಲಿ ಹೆಜ್ಜೆಯಿಟ್ಟ ಚೆಲುವೆಯರು
50 ಜನ ಸ್ಪರ್ಧಾಳುಗಳ ನಡುವೆ ಅಂತಿಮವಾಗಿ ನೇಹಾ ಶೆಟ್ಟಿ ಪ್ರಥಮ ಸ್ಥಾನ ಅಲಂಕರಿಸಿದರೆ ಐಶ್ವರ್ಯ ಎರಡನೇ ಸ್ಥಾನ ಪಡೆದರು.
ಒಟ್ಟಿನಲ್ಲಿ ಸಭ್ಯತೆಯ ಮೂಸೆಯೊಳಗೆ ಶೃಂಗಾರ ರಸ ಹರಿಸಿ ನೋಡುಗರ ಮನಸ್ಸು ಗೆಲ್ಲುವಲ್ಲಿ ‘ಮಿಸ್ ಶಿರಸಿ‘ ಯಶಸ್ವಿಯಾಯಿತು.