ನಾಯಿ ಮರಿ ಎಂದು ಚಿರತೆ ಮರಿಯನ್ನು ಮನೆಗೆ ತಂದ ಮಂಡ್ಯದ ಬಾಲಕ!
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೂಳಗೆರೆ ಗ್ರಾಮದಲ್ಲಿ ನಡೆದ ವಿಚಿತ್ರ ಘಟನೆಯಿದು!
ಆಟವಾಡ್ತಿದ್ದ ಮಕ್ಕಳಿಗೆ ಕಂಡ ಚಿರತೆ ಮರಿ!
ಹೊಲದಲ್ಲಿ ಒಟ್ಟು 8 ಚಿರತೆ ಮರಿಗಳಿದ್ವು,
ಭಾರೀ ಚಂದದ ನಾಯಿ ಅಂತ ಭಾವಿಸಿ 2 ಚಿರತೆ ಮರಿಗಳನ್ನ ಮನೆಗೆ ತಂದಿದ್ದಾರೆ.
ಚಿರತೆ ಮರಿಗಳನ್ನ ಕೋಳಿ ಗೂಡಿನಲ್ಲಿಟ್ಟು ಸಾಕಲು ಮುಂದಾಗಿದ್ದಾರೆ!
ಆದ್ರೆ ಮನೆಗೆ ತಂದ್ಮೇಲೇ ಸತ್ಯ ಹೊರಬಿದ್ದಿದೆ
ಇವು ನಾಯಿಮರಿಯಲ್ಲ, ಚಿರತೆ ಮರಿ ಎಂಬ ಸತ್ಯ ಹೊರಬಿದ್ದಿದೆ
ಈ ಸುದ್ದಿ ಗೊತ್ತಾಗ್ತಿದ್ದಂತೆ ಚಿರತೆ ಮರಿಯನ್ನ ನೋಡಲು ಕೂಳಗೆರೆ ಗ್ರಾಮಸ್ಥರು ಮುಗಿಬಿದ್ದಿದ್ದಾರೆ
ಒಟ್ಟಾರೆ ಈ ಘಟನೆ ಭಾರೀ ವೈರಲ್ ಆಗ್ತಿದೆ