HDKಗೆ ಅಡಿಕೆ ಮಾಲೆ ತಯಾರಿಸಿದ ಕಲಾವಿದ ಇವರೇ!
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಡೆಸುತ್ತಿರೋ ಪಂಚರತ್ನ ಯಾತ್ರೆಯಲ್ಲಿ ಹಾರಗಳೇ ಫೇಮಸ್!
ಇತ್ತೀಚಿಗೆ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ಗೂ HDK ಸೇರ್ಪಡೆಗೊಂಡಿದ್ದಾರೆ
ಉತ್ತರ ಕನ್ನಡ ಜಿಲ್ಲೆಯಲ್ಲೂ ಇತ್ತೀಚಿಗೆ ನಡೆದ ಎರಡು ದಿನಗಳ ಯಾತ್ರೆಯಲ್ಲೂ ಹೆಚ್ಡಿಕೆ ಕೊರಳಿಗೆ ವಿಶೇಷ ಹಾರಗಳು ಬಿದ್ದಿವೆ
ಅದರಲ್ಲೂ ಅಡಿಕೆ ಹಾರ ಎಲ್ಲರ ಗಮನ ಸೆಳೆದಿದೆ
ನಾಲ್ಕೈದು ದಿನಗಳ ಕಾಲ ಶ್ರಮಪಟ್ಟು, ರಾತ್ರಿ- ಹಗಲೆನ್ನದೇ ಈ ಹಾರವನ್ನ ತಯಾರಿಸಲಾಗಿದೆ
ಮಾಜಿ ಸಿಎಂ ಕುಮಾರಸ್ವಾಮಿ ಈ ಹಾರದ ವಿಡಿಯೋ ಟ್ವೀಟ್ ಮಾಡುವ ಮೂಲಕ ಕಾರ್ಯಕರ್ತರ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಜೆಡಿಎಸ್ ಕಾರ್ಯಕರ್ತ ಅರುಣ್ ಗೌಡಾ ಅವರು ಈ ಹಾರವನ್ನು ತಯಾರಿಸಿದ್ದಾರೆ
ಈ ವಿಶೇಷ ಅಡಿಕೆ ಹಾರವನ್ನ ಉತ್ತರ ಕನ್ನಡದ ಶಿರಸಿಯಲ್ಲೇ ತಯಾರಿಸಲಾಗಿದೆ
ಕುಮಾರಸ್ವಾಮಿಯವರ ಅಭಿಮಾನಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರೇ ಸೇರಿ ಈ ಹಾರವನ್ನ ತಯಾರಿಸಿರುವುದು ಮತ್ತೊಂದು ವಿಶೇಷ