Sankranti ದಿನ ಶಿವನಿಗೆ ಸೂರ್ಯನ ಅಭಿಷೇಕ!

ಮಕರ ಸಂಕ್ರಾಂತಿಯಂದು ಗವಿ ಗಂಗಾಧರೇಶ್ವರ ದೇಗುಲದಲ್ಲಿ ನಡೆಯುತ್ತೆ ಅದ್ಬುತ ಚಮತ್ಕಾರ

ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪಥ ಬದಲಿಸುವ ಸಮಯದಲ್ಲಿ ಗೋಚರವಾಗುತ್ತೆ ವಿಸ್ಮಯ

ಉತ್ತರಾಯಣ ಪುಣ್ಯ ಕಾಲದಲ್ಲಿ ಗವಿ ಗಂಗಾಧರೇಶ್ವರ ದೇಗುಲ ಅದ್ಭುತ ಕ್ಷಣಕ್ಕೆ ಸಾಕ್ಷಿಯಾಗುತ್ತದೆ

ಸಂಕ್ರಾಂತಿ ದಿನ ಸಂಜೆಯ ವೇಳೆ ಸೂರ್ಯನ ಕಿರಣಗಳು ಗವಿ ಗಂಗಾಧರೇಶ್ವರ ಸ್ವಾಮಿಯನ್ನು ಸ್ಪರ್ಶಿಸುತ್ತವೆ

ಸೂರ್ಯನ ರಶ್ಮಿಗಳು ನೇರವಾಗಿ ದೇಗುಲದ ಒಳಗಿನ ಗರ್ಭಗುಡಿಯಲ್ಲಿನ ಶಿವಲಿಂಗದ ಮೇಲೆ ಬೀಳುತ್ತದೆ

ಇಂತಹ ಅಪರೂಪದ ಘಟನೆ  ಗವಿ ಗಂಗಾಧರೇಶ್ವರ ದೇಗುಲದಲ್ಲಿ ಮಾತ್ರ ನಡೆಯುತ್ತದೆ

ಸಮಯದಲ್ಲಿ ದೇವರಿಗೆ ವಿಶೇಷ ಅಭಿಷೇಕಗಳನ್ನು ಮಾಡಲಾಗುತ್ತದೆ

ದೇವಾಲಯದಲ್ಲಿ ಡೊಳ್ಳು, ನಗಾರಿ, ಗಂಟೆಗಳ ನಾದ ಮೂಲಕ ಶಿವನಿಗೆ ವಿಶೇಷ ಪೂಜೆ ನಡೆಸಲಾಯಿತು

ಪ್ರತಿ ವರ್ಷ ಸಂಕ್ರಾಂತಿಯಂದು ಪ್ರಕೃತಿಯ ವಿಸ್ಮಯವನ್ನು  ಕಣ್ತುಂಬಿಕೊಳ್ಳಲು ಭಕ್ತರು ಕಾತುರರಾಗಿರುತ್ತಾರೆ