ಮಲೆನಾಡು ಸ್ಟೈಲ್ ನಲ್ಲಿ ಬೆಳ್ಳುಳ್ಳಿ ಚಟ್ನಿ ಮಾಡಿ
ಇದಕ್ಕೆ ಬೇಕಾಗುವ ಸಾಮಾಗ್ರಿಗಳು, ಸಾಸಿವೆ, ತುಪ್ಪ, ಬೆಣ್ಣೆ, ಉದ್ದಿನ ಬೇಳೆ, ಬೆಳ್ಳುಳ್ಳಿ, ಇಂಗು.
ಪೇಸ್ಟ್ ಮಾಡಲು, ತೆಂಗಿನ ತುರಿ, ಸಾಸಿವೆ, ಟೊಮೆಟೊ, ಒಣಗಿದ ಕೆಂಪು ಮೆಣಸಿನ ಕಾಯಿ ಬೇಕಾಗುತ್ತದೆ.
ಹಾಗೆಯೇ ಹುಣಸೆ ಹಣ್ಣಿನ ರಸ, ಅರಿಶಿಣ, ಉಪ್ಪು ಮತ್ತು ಬೆಲ್ಲ
ಬೆಳ್ಳುಳ್ಳಿ ಕಂದು ಬಣ್ಣಕ್ಕೆ ಬರುವ ತನಕ ಚೆನ್ನಾಗಿ ಹುರಿಯಿರಿ.
ತೆಂಗಿನಕಾಯಿ, ಸಾಸಿವೆ, ಟೊಮೆಟೊ, ಕೆಂಪು ಮೆಣಸಿನಕಾಯಿಯನ್ನು ಮಿಕ್ಸಿಗೆ ಹಾಕಿ, ಅದಕ್ಕೆ ಬೇಕಾಗುವಷ್ಟು ನೀರನ್ನು ಹಾಕಿ ಚೆನ್ನಾಗಿ ರುಬ್ಬಿ.
ಒಂದು ಬಾಣಲೆಗೆ ಹುಣಸೆ ಹಣ್ಣಿನ ನೀರು, ಉಪ್ಪು, ಅರಿಶಿಣ, ಉಪ್ಪು ಮತ್ತು ಬೆಲ್ಲವನ್ನು ಹಾಕಬೇಕು
ಈಗಾಗಲೇ ತಯಾರಿಸಲಾದ ಮಸಾಲ ಪೇಸ್ಟ್ ನ್ನು ಆ ನೀರಿನೊಂದಿಗೆ ಮಿಶ್ರಣ ಮಾಡಿ
ಹುರಿದ ಬೆಳ್ಳುಳ್ಳಿಯನ್ನು ಇದಕ್ಕೆ ಚೆನ್ನಾಗಿ ಮಿಶ್ರಣ ಮಾಡಿ.
ಎಣ್ಣೆ ಬೇರ್ಪಡುವ ತನಕ ಬೇಯಿಸಿದರೆ ಮಲೆನಾಡು ಸ್ಟೈಲ್ ನಲ್ಲಿ ಬೆಳ್ಳುಳ್ಳಿ ಚಟ್ನಿ ರೆಡಿ